ಗೋಲ್ಡನ್‌ಸ್ಟಾರ್ 42: ಗಣೇಶ್ ನಟನೆಯ 42ನೇ ಚಿತ್ರದ ಪೋಸ್ಟರ್‌ ಇಂದು ಬಿಡುಗಡೆ! » Dynamic Leader
December 13, 2024
ಸಿನಿಮಾ

ಗೋಲ್ಡನ್‌ಸ್ಟಾರ್ 42: ಗಣೇಶ್ ನಟನೆಯ 42ನೇ ಚಿತ್ರದ ಪೋಸ್ಟರ್‌ ಇಂದು ಬಿಡುಗಡೆ!

ವರದಿ: ಅರುಣ್ ಜಿ.,

ವಿಖ್ಯಾತ್‌ ಪ್ರೊಡಕ್ಷನ್‌ ಅಂದರೇನೆ, ಅದ್ಧೂರಿತನ ಕಣ್ಮುಂದೆ ಬರುತ್ತದೆ. ಈ ವರೆಗೆ ನಿರ್ಮಾಪಕ ವಿಖ್ಯಾತ್‌ ನಿರ್ಮಿಸಿರುವ ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್‌ ವಿಕ್ರಂ, ಮಾನ್ಸೂನ್‌ ರಾಗ ಮೊದಲಾದ ಚಿತ್ರಗಳು ತಾಂತ್ರಿಕವಾಗಿ ಶ್ರೀಮಂತಿಕೆ ಹೊಂದಿದ್ದವು.

ಅದೆಷ್ಟೇ ಕಷ್ಟವಾದರೂ ತೆರೆಮೇಲಿನ ದೃಶ್ಯಗಳು ರಿಚ್‌ ಆಗಿ ಮೂಡಿಬರಬೇಕು ಅಂತಾ ಬಯಸೋ ನಿರ್ಮಾಪಕರಲ್ಲಿ ವಿಖ್ಯಾತ್‌ ಖ್ಯಾತರಾಗಿದ್ದಾರೆ. ಸ್ಟಾರ್‌ಗಳ ಡೇಟ್ಸ್‌ ಸಿಕ್ತಾ, ರಪಾರಪಾ ಸಿನಿಮಾ ಮುಗಿಸಿ, ವ್ಯಾಪಾರ ಮುಗಿಸುವ ಜಾಯಮಾನ ವಿಖ್ಯಾತ್‌ ಅವರದ್ದಲ್ಲ. ಇಂಥ ವಿಖ್ಯಾತ್‌ ಈಗ ಗೋಲ್ಡನ್‌ಸ್ಟಾರ್ ಗಣೇಶ್‌ ಅವರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇನ್ನೂ ಟೈಟಲ್‌ ರಿವೀಲ್‌ ಆಗದ ಚಿತ್ರದ ಪೋಸ್ಟರ್‌ ಇಂದು ಹೊರಬಂದಿದೆ. ಈ ಬಾರಿ ಗಣೇಶ್‌ ಜನರನ್ನು ಗ್ಲೋಬಲ್‌ ಲೆವೆಲ್ಲಿನಲ್ಲಿ ರಂಜಿಸಲೆಂದೇ ಸಿದ್ದವಾಗುತ್ತಿದ್ದಾರೆ ಅನ್ನೋ ಸೂಚನೆಯಂತೂ ದೊರಕಿದೆ.

ಇದು ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ ಚಿತ್ರವಾಗಲಿದೆ ಅನ್ನೋದು ನಿರ್ಮಾಪಕ ವಿಖ್ಯಾತ್‌ ಅಭಿಪ್ರಾಯವಾಗಿದೆ. ಇದು ಗಣೇಶ್ ನಟನೆಯ 42ನೇ ಚಿತ್ರವಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಿರ್ಮಾಣದ 6ನೇ ಚಿತ್ರವಿದು. ವಿಶೇಷವೆಂದರೆ, ಇದು ಬಿಗ್ ಬಜೆಟ್ಟಿನ, ದೊಡ್ಡ ಕ್ಯಾನ್ವಾಸಿನ ಪ್ಯಾನಿಂಡಿಯಾ ಚಿತ್ರ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಪ್ಯಾನಿಂಡಿಯಾ ಲೆವೆಲ್ಲಿಗೆ ಲಗ್ಗೆಯಿಡಲಿದ್ದಾರೆ. ಈ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ಬಯಲಾಗಲಿವೆ.

Related Posts