ರೋಮ್‌ನಂತೆ ಮಣಿಪುರವೂ ಹೊತ್ತಿ ಉರಿಯುತ್ತಿದೆ; ರೋಮ್ ದೊರೆ ನೀರೋಗೂ ಪ್ರಧಾನಿ ಮೋದಿಗೂ ಏನೂ ವ್ಯತ್ಯಾಸವಿಲ್ಲ! » Dynamic Leader
October 11, 2024
ರಾಜಕೀಯ

ರೋಮ್‌ನಂತೆ ಮಣಿಪುರವೂ ಹೊತ್ತಿ ಉರಿಯುತ್ತಿದೆ; ರೋಮ್ ದೊರೆ ನೀರೋಗೂ ಪ್ರಧಾನಿ ಮೋದಿಗೂ ಏನೂ ವ್ಯತ್ಯಾಸವಿಲ್ಲ!

ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸೋ ಕಾಲ್ಡ್ ವಿಶ್ವಗುರು ಮೋದಿ ತುಟಿ ಬಿಚ್ಚುತ್ತಿಲ್ಲ. ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮೋದಿಯವರಿಂದ ಒಂದು ಸಣ್ಣ ಪ್ರಯತ್ನವೂ ಆಗಿಲ್ಲ.

ಆಂತರಿಕ ಸಂಘರ್ಷದಿಂದ ಮಣಿಪುರ ಅರಾಜಕತೆಯ ರಾಜ್ಯವಾಗಿದೆ. ಉಗ್ರರ ಮುಂದೆ ಸೇನೆಯೂ ಅಸಹಾಯಕವಾಗಿದೆ‌. ಮಣಿಪುರದಲ್ಲಿ ಯೋಧರಿಗೇ ರಕ್ಷಣೆಯಿಲ್ಲ. ಹೀಗಿರುವಾಗ ನಾಗರಿಕರ ಜೀವಕ್ಕೆ ರಕ್ಷಣೆ ಒದಗಿಸುವರ್ಯಾರು? ಮಣಿಪುರದಲ್ಲಿ ನಾಗರಿಕ ಯುದ್ಧ ತಾರಕಕ್ಕೇರಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದ್ಯಾಕೆ? ಕೇಂದ್ರಕ್ಕೆ ದಂಗೆ ನಿಯಂತ್ರಿಸದಷ್ಟು ಹೇಡಿತನವೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸೋ ಕಾಲ್ಡ್ ವಿಶ್ವಗುರು ಮೋದಿ ತುಟಿ ಬಿಚ್ಚುತ್ತಿಲ್ಲ. ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮೋದಿಯವರಿಂದ ಒಂದು ಸಣ್ಣ ಪ್ರಯತ್ನವೂ ಆಗಿಲ್ಲ. ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸುವ ಶಕ್ತಿಯಿದೆ ಎಂದು ಬಿಂಬಿಸಿಕೊಳ್ಳುವ ಮೋದಿಗೆ, ತನ್ನದೇ ದೇಶದ ಒಂದು ರಾಜ್ಯದಲ್ಲಿ ನಡೆಯುತ್ತಿರುವ ದಂಗೆ ನಿಲ್ಲಿಸಲು ಸಾಧ್ಯವಿಲ್ಲವೇ?

ರೋಮ್‌ನಂತೆ ಮಣಿಪುರವೂ ಹೊತ್ತಿ ಉರಿಯುತ್ತಿದೆ. ರೋಮ್ ಹೊತ್ತಿ ಉರಿಯುವಾಗ ಅಲ್ಲಿನ ದೊರೆ ನೀರೋ ಯಾವುದೇ ಚಿಂತೆಯಿಲ್ಲದೆ ಪಿಟೀಲು ಬಾರಿಸುತ್ತಿದ್ದ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇಲ್ಲಿನ ದೊರೆ ಮೋದಿ ಯಾವುದೇ ಚಿಂತೆಯಿಲ್ಲದೆ ವಿದೇಶ ಪ್ರವಾಸದಲ್ಲಿದ್ದಾರೆ. ರೋಮ್ ದೊರೆ ನೀರೋಗೂ ಪ್ರಧಾನಿ ಮೋದಿಗೂ ಏನಾದರೂ ವ್ಯತ್ಯಾಸವಿದೆಯೇ ಎಂದು ಹೇಳಿದ್ದಾರೆ.

Related Posts