'ಲಿಯೋ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಧ್ಯರಾತ್ರಿ ಬಿಡುಗಡೆ! » Dynamic Leader
October 11, 2024
ಸಿನಿಮಾ

‘ಲಿಯೋ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಧ್ಯರಾತ್ರಿ ಬಿಡುಗಡೆ!

ವರದಿ: ಅರುಣ್ ಜಿ.,

ವಿಜಯ್ ಅಭಿನಯದ ಲೋಕೇಶ್ ಕನಕರಾಜ್ ನಿರ್ದೇಶನದ ‘ಲಿಯೋ’ ಚಿತ್ರವು ಅದ್ಧೂರಿಯಾಗಿ ತೆರೆಕಾಣುವ ಅಂತಿಮ ಹಂತದ ತಯಾರಿಯಲ್ಲಿದೆ. ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪುತ್ತಿರುವ ಹಿನ್ನಲೆಯಲ್ಲಿ, ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಲೋಕೇಶ್ ಕನಕರಾಜ್ ಮಧ್ಯರಾತ್ರಿ 12 ಗಂಟೆಗೆ ‘ಲಿಯೋ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಮತ್ತೆ ನಿಮ್ಮೊಂದಿಗೆ ಕೈ ಜೋಡಿಸಲು ಖುಷಿಯಾಗುತ್ತಿದೆ ಅಣ್ಣಾ’ ಎಂದು ಲೋಕೇಶ್ ಕನಕರಾಜ್ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ನಲ್ಲಿ ವಿಜಯ್ ಕೈಯಲ್ಲಿ ಸುತ್ತಿಗೆ ಹಿಡಿದು ರಕ್ತ ಚೆಲ್ಲುತ್ತಾ ಆಕ್ರಮಣಕಾರಿಯಾಗಿ ಕಾಣುತ್ತಿದ್ದಾರೆ. ಹಿಮಾವೃತ ಪರ್ವತಗಳು ಹಿನ್ನಲೆಯಲ್ಲಿವೆ. ಜೊತೆಯಲ್ಲೇ In the WORLD Of Untamed Rivers, Calm Water Either Become Divine GOD or Dreaded DEMONS ಎಂಬ ಸಂಭಾಷಣೆ ಎದ್ದು ಕಾಣುತ್ತಿವೆ. ಇದರ ಅರ್ಥ, ಕಡಿವಾಣವಿಲ್ಲದ ನದಿಗಳ ಜಗತ್ತಿನಲ್ಲಿ ಶಾಂತ ನೀರು, ದೈವಿಕ ದೇವತೆಗಳಂತೆ ಅಥವಾ ಬಯಾನಕ ದೆವ್ವಗಳಂತೆ ರೂಪಾಂತರಗೊಳ್ಳಬಹುದು” ಎಂಬುದಾಗಿದೆ.

ಲಿಯೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆದ ನಂತರ ವಿಜಯ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೇ ಇಂದು ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಸಿಂಗಲ್ ಸಾಂಗ್ ‘ನಾ ರೆಡಿ’ ಬಿಡುಗಡೆಯಾಗಿ ಗಮನ ಸೆಳೆದಿದೆ.

Related Posts