ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೇಡಿತನದ ಮತ್ತು ದುರಹಂಕಾರದ ಕ್ರಮಗಳನ್ನು ಅನುಸರಿಸುತ್ತಿದೆ! ಎಂ.ಕೆ.ಸ್ಟಾಲಿನ್ » Dynamic Leader
October 11, 2024
ರಾಜಕೀಯ

ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೇಡಿತನದ ಮತ್ತು ದುರಹಂಕಾರದ ಕ್ರಮಗಳನ್ನು ಅನುಸರಿಸುತ್ತಿದೆ! ಎಂ.ಕೆ.ಸ್ಟಾಲಿನ್

ಕೊಯಮತ್ತೂರು: ತಮಿಳುನಾಡು ಸರ್ಕಾರದ ಇಂಧನ ಸಚಿವ ಸೆಂಥಿಲ್ ಬಾಲಾಜಿಯ ಅಕ್ರಮ ಬಂಧನವನ್ನು ಖಂಡಿಸಿ, ತಮಿಳುನಾಡು ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ವತಿಯಿಂದ ಇಂದು ಕೊಯಮತ್ತೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪ್ರತಿಭಟನಾ ಧರಣಿಯನ್ನು ಉಲ್ಲೇಖಿಸಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರು ಮಾಡಿರುವ ಟ್ವೀಟ್ ನಲ್ಲಿ,  “ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ ನಮ್ಮ ಎಲ್ಲಾ ಜಾತ್ಯತೀತ ಪ್ರಗತಿಪರ ಮೈತ್ರಿ ಪಕ್ಷದ ನಾಯಕರಿಗೆ ಧನ್ಯವಾದಗಳು!

ನಾವು ಇಂದು ಕೊಯಮತ್ತೂರಿನಲ್ಲಿ ಪ್ರದರ್ಶಿಸಿದ ಏಕತೆ ಮತ್ತು ಸಂಕಲ್ಪ ಎಲ್ಲೆಡೆ ಹರಡಿದೆ. ಸುಳ್ಳು ಕಥೆಗಳಿಂದ ಬಿಜೆಪಿ ಸೃಷ್ಟಿಸಿರುವ ‘ನಮ್ಮನ್ನು ಸೋಲಿಸಲು ಸಾದ್ಯವಿಲ್ಲ’ ಎಂಬ ಬಿಂಬದ ಅಡಿಪಾಯವನ್ನು ಇಂದು ಅಲಗಾಡಿಸಲಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಖಚಿತ ಎಂದು ಬಿಜೆಪಿಗೆ ಅರಿವಾಗಿದೆ.

ಆದ್ದರಿಂದ ಪ್ರತಿಪಕ್ಷಗಳನ್ನು ರಾಜಕೀಯವಾಗಿ ಎದುರಿಸುವ ಬದಲು, ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೇಡಿತನದ ಮತ್ತು ದುರಹಂಕಾರದ ಕ್ರಮಗಳನ್ನು ಅನುಸರಿಸುತ್ತಿದೆ. ಭಾರತದಾದ್ಯಂತ ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದು ಬಿಜೆಪಿಯ ಶವಪೆಟ್ಟಿಗೆಗೆ ಹೊಡೆಯುವ ಅಂತಿಮ ಮೊಳೆಯಾಗಲಿದೆ” ಎಂದು ಹೇಳಿದ್ದಾರೆ.

I thank all the leaders of our Secular Progressive Alliance for having registered their protest against the Union BJP Government’s blatant misuse of investigating agencies for political ends.

The unity and solidarity shown in Coimbatore today will spread everywhere and shake the foundation of BJP’s invincible ‘image’ constructed by false narratives.

BJP has realised that an impending defeat stares them in the face. To hide the failures of BJP, it is resorting to acts of cowardice and arrogance, instead of fighting the opponents politically. The coming together of opposition all over India will be the final nail in the coffin of ‘autocratic’ BJP.

Related Posts