27 ವರ್ಷಗಳ ನಂತರ ಮತ್ತೆ ಭಾರತಕ್ಕೆ ಮರಳಿದ ವಿಶ್ವ ಸುಂದರಿ ಸ್ಪರ್ಧೆ! » Dynamic Leader
December 13, 2024
ದೇಶ

27 ವರ್ಷಗಳ ನಂತರ ಮತ್ತೆ ಭಾರತಕ್ಕೆ ಮರಳಿದ ವಿಶ್ವ ಸುಂದರಿ ಸ್ಪರ್ಧೆ!

27 ವರ್ಷಗಳ ನಂತರ ಮತ್ತೆ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ. ಮಿಸ್ ವರ್ಲ್ಡ್ ಎಂದು ಹೇಳುವ ವಿಶ್ವ ಸುಂದರಿ ಸ್ಪರ್ಧೆಯು ಎಂದಿನಂತೆ ಪ್ರತಿ ವರ್ಷವ ನಡೆಯುತ್ತದೆ. ಕೊನೆಯದಾಗಿ ವಿಶ್ವ ಸುಂದರಿ ಸ್ಪರ್ಧೆಯನ್ನು 1996ರಲ್ಲಿ ಕರ್ನಾಟಕದ ರಾಜದಾನಿ ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಹಿನ್ನಲೆಯಲ್ಲಿ, 2023ರ ವಿಶ್ವ ಸುಂದರಿಯನ್ನು ಆಯ್ಕೆ ಮಾಡುವ ಅಂತಿಮ ಸ್ಪರ್ಧೆ, ನವೆಂಬರ್‌ ತಿಂಗಳಲ್ಲಿ ನಮ್ಮ ದೇಶದಲ್ಲಿ ನಡೆಯಲಿದೆ.

ಇದು 71ನೇ ವಿಶ್ವ ಸುಂದರಿ ಸ್ಪರ್ಧೆ. ಈ ಬಗ್ಗೆ ಮಾತನಾಡಿದ ವಿಶ್ವ ಸುಂದರಿ ಸ್ಪರ್ಧೆಯ ಅಧ್ಯಕ್ಷೆ ಜೂಲಿಯಾ ಮೊರ್ಲಿ, “ವಿಶ್ವ ಸುಂದರಿ ಸ್ಪರ್ಧೆಯನ್ನು ಮತ್ತೆ ಭಾರತದಲ್ಲಿ ನಡೆಸಲಾಗುವುದು ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಒಂದು ತಿಂಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ 130 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ” ಎಂದರು.

ಪ್ರಸ್ತುತ ಯುರೋಪಿಯನ್ ದೇಶವಾದ ಪೋಲೆಂಡ್‌ನ ಕರೋಲಿನಾ ವಿಶ್ವ ಸುಂದರಿಯಾಗಿದ್ದಾರೆ. ಅವರು ಈಗ ಭಾರತಕ್ಕೆ ಬಂದಿದ್ದಾರೆ. ಅವರು ಮಾತನಾಡುತ್ತಾ, “ಭಾರತವು ವಿಶ್ವದ ಅತ್ಯುತ್ತಮ ಆತಿಥ್ಯ ಸಂಸ್ಕೃತಿಯನ್ನು ಹೊಂದಿದೆ ದೇಷವಾಗಿದೆ. ಇದು ನನ್ನ ತಾಯಿ ಮನೆ ಅನ್ನಿಸುತ್ತದೆ. ಇಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿರುವುದು ಸಂತಸ ತಂದಿದೆ” ಎಂದು ಹೇಳಿದ್ದಾರೆ. Miss World Organization on June 8 announced that India will host the highly anticipated 71st Miss World 2023 pageant after a gap of nearly three decades.

Related Posts