ವೈದ್ಯ ಕೋರ್ಸಿನಲ್ಲಿ ಸ್ವರ್ಣ ಪದಕಗಳನ್ನು ಗಳಿಸಿದ ಚನ್ನಪಟ್ಟಣದ ಡಾ.ಅನುಶ್ರೀ: ಹಾರೈಸಿದ ಹೆಚ್.ಡಿ.ಕುಮಾರಸ್ವಾಮಿ » Dynamic Leader
December 13, 2024
ರಾಜ್ಯ

ವೈದ್ಯ ಕೋರ್ಸಿನಲ್ಲಿ ಸ್ವರ್ಣ ಪದಕಗಳನ್ನು ಗಳಿಸಿದ ಚನ್ನಪಟ್ಟಣದ ಡಾ.ಅನುಶ್ರೀ: ಹಾರೈಸಿದ ಹೆಚ್.ಡಿ.ಕುಮಾರಸ್ವಾಮಿ

ವೈದ್ಯ ಕೋರ್ಸಿನಲ್ಲಿ ಸ್ವರ್ಣ ಪದಕಗಳನ್ನು ಗಳಿಸಿ, ಆ ನಂತರ ಸ್ನಾತಕೋತ್ತರ ಪರೀಕ್ಷೆಯಲ್ಲೂ ಇಡೀ ಭಾರತಕ್ಕೆ 2000ನೇ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆ ಎಂದು ಬಣ್ಣಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,

“ನನ್ನ ಮತಕ್ಷೇತ್ರ ಚನ್ನಪಟ್ಟಣದ ಚಕ್ಕಲೂರು ಗ್ರಾಮದ ರೈತರ ಮನೆಯ ಮಗಳು ಡಾ.ಅನುಶ್ರೀ ಅವರು ವೈದ್ಯಕೀಯ ಶಿಕ್ಷಣದಲ್ಲಿ ಮಾಡಿರುವ ಅನುಪಮ ಸಾಧನೆ ಬಗ್ಗೆ ತಿಳಿದು ನನಗೆ ಬಹಳ ಸಂತೋಷವಾಗಿದೆ. ಅವರ ಪ್ರತಿಭೆ ಎಲ್ಲರಿಗೂ ಮಾದರಿ ಹಾಗೂ ಪ್ರೇರಣೆ. ಅವರು ಚನ್ನಪಟ್ಟಣದ ಕೀರ್ತಿಯ ಕಳಸ.

ವೈದ್ಯ ಕೋರ್ಸಿನಲ್ಲಿ ಸ್ವರ್ಣ ಪದಕಗಳನ್ನು ಗಳಿಸಿ, ಆ ನಂತರ ಸ್ನಾತಕೋತ್ತರ ಪರೀಕ್ಷೆಯಲ್ಲೂ ಇಡೀ ಭಾರತಕ್ಕೆ 2000ನೇ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆ. ಡಾ.ಅನುಶ್ರೀ ಅವರಿಗೆ ಎಲ್ಲವೂ ಒಳ್ಳೆಯದಾಗಲಿ, ಭವಿಷ್ಯದಲ್ಲಿ ಅವರು ಇನ್ನೂ ಎತ್ತರದ ಸ್ಥಾನ ತಲುಪಲಿ ಎಂದು ಹಾರೈಸುತ್ತೇನೆ. ಅವರ ಪೋಷಕರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

 

Related Posts