ಬೆಂಗಳೂರು ನಗರ ಎಂಟು ವಿಭಾಗಗಳ ವ್ಯಾಪ್ತಿಯಲ್ಲಿ 1344 ರೌಡಿಗಳ ನಿದ್ದೆ ಗೆಡಿಸಿದ ಪೊಲೀಸರು! » Dynamic Leader
September 18, 2024
ಕ್ರೈಂ ರಿಪೋರ್ಟ್ಸ್

ಬೆಂಗಳೂರು ನಗರ ಎಂಟು ವಿಭಾಗಗಳ ವ್ಯಾಪ್ತಿಯಲ್ಲಿ 1344 ರೌಡಿಗಳ ನಿದ್ದೆ ಗೆಡಿಸಿದ ಪೊಲೀಸರು!

ಬೆಂಗಳೂರು ನಗರ 08 ವಿಭಾಗಗಳ ವ್ಯಾಪ್ತಿಯಲ್ಲಿ 1344 ರೌಡಿ ಪಟ್ಟಿ ಆಸಾಮಿಗಳ ನಿವಾಸಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಸಿ, 9.1 ಕೆಜಿ ಗಾಂಜಾ, ದುಷ್ಕೃತ್ಯಕ್ಕೆ ಸಂಗ್ರಹಿಸಿದ್ದ ಮಾರಕಾಸ್ತ್ರಗಳು, 16 ವಾಹನಗಳನ್ನು ಅಮಾನತ್ತು ಪಡಿಸಿಕೊಂಡು, 05 ಕ್ರಿಮಿನಲ್ ಪ್ರಕರಣ ದಾಖಲಿಸಿದೆ.

ಬೆಂಗಳೂರು ನಗರ ವ್ಯಾಪ್ತಿಯ 08 ವಿಭಾಗದ ಪೊಲೀಸ್ ಅಧಿಕಾರಿಗಳು ಇಂದು (08.06.2023) ಮುಂಜಾನೆ ಏಕಕಾಲಕ್ಕೆ 1334 ರೌಡಿ ಆಸಾಮಿಗಳ ನಿವಾಸಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಕೆಲವು ರೌಡಿಗಳ ವಶದಲ್ಲಿ ಗಾಂಜಾ, ಮಾರಕಾಸ್ತ್ರಗಳು, ಕಳ್ಳತನದ ವಾಹನಗಳು ಪತ್ತೆಯಾಗಿದ್ದು, ಈ ಕಾರ್ಯಚರಣೆಯಲ್ಲಿ ಒಟ್ಟು 09.01 ಕೆ.ಜಿ. ಗಾಂಜಾ, 16 ವಾಹನಗಳು ಮತ್ತು ಮಾರಕಾಸ್ತ್ರಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳ ವಿರುದ್ದ ಶಸ್ತ್ರಾಸ್ತ್ರ ಕಾಯಿದೆ ಅಡಿ 02 ಪ್ರಕರಣ, ಎನ್ ಡಿ ಪಿ ಎಸ್ ಕಾಯಿದೆ ಅಡಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಲ್ಲದೆ, ಈ ಕಾರ್ಯಚರಣೆಯಲ್ಲಿ ವಿಚಾರಣಾ ಪ್ರಕರಣಗಳ್ಳಿ ನ್ಯಾಯಾಲಯಗಳಿಂದ ಹೊರಡಿಸಲಾಗಿದ್ದ ರೌಡಿಗಳ ವಿರುದ್ದದ 46 ಜಾಮೀನು ರಹಿತ ವಾರಂಟ್ ಆಸಾಮಿಗಳನ್ನು ಪತ್ತೆ ಮಾಡಿ ಸಂಬಂಧಪಟ್ಟ ನ್ಯಾಯಾಲಯಗಳಿಗೆ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದೆ.

Related Posts