ಕೋಟ್ಯಾಂತರ ಬೆಲೆಬಾಳುವ 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಶ! ಸಿಸಿಬಿ ಕಾರ್ಯಚರಣೆ » Dynamic Leader
October 4, 2024
ಕ್ರೈಂ ರಿಪೋರ್ಟ್ಸ್

ಕೋಟ್ಯಾಂತರ ಬೆಲೆಬಾಳುವ 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಶ! ಸಿಸಿಬಿ ಕಾರ್ಯಚರಣೆ

ಬೆಂಗಳೂರು: ಸಿಸಿಬಿ ಕಾರ್ಯಚರಣೆ, ತಮಿಳುನಾಡು ಮೂಲದ ಇಬ್ಬರು ಬಂಧನ. ಕೋಟ್ಯಾಂತರ ಬೆಲೆಬಾಳುವ 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ದಿನಾಂಕ: 30-05-2023 ರಂದು ತಮಿಳುನಾಡು ರಾಜ್ಯದಿಂದ ಬೆಂಗಳೂರಿಗೆ ಬಂದು, ಕಾನೂನು ಬಾಹೀರವಾಗಿ ಸುಮಾರು 6.5 ಕೆಜಿ ತೂಕದ ನಿಷೇಧಿತ ಅಂಬರ್ ಗ್ರೀಸ್ ವಸ್ತುವನ್ನು, ಕೋಟ್ಯಾಂತರ ರೂಪಾಯಿ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಇಬ್ಬರು ಆಸಾಮಿಗಳನ್ನು ಬಂಧಿಸಿ ಕೋಟ್ಯಾಂತರ ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳ ವಿರುದ್ಧ ಬೆಂಗಳೂರು ನಗರ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಿಸಿಬಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Related Posts