ಸಿಬಿಐ ಕೋರ್ಟ್ ನಲ್ಲಿ ಮನೀಶ್ ಸಿಸೋಡಿಯಾ ಕತ್ತು ಹಿಡಿದು ಎಳೆದೊಯ್ದ ದೆಹಲಿ ಪೊಲೀಸ್: ಆಮ್ ಆದ್ಮಿ ಖಂಡನೆ! » Dynamic Leader
December 14, 2024
ದೇಶ

ಸಿಬಿಐ ಕೋರ್ಟ್ ನಲ್ಲಿ ಮನೀಶ್ ಸಿಸೋಡಿಯಾ ಕತ್ತು ಹಿಡಿದು ಎಳೆದೊಯ್ದ ದೆಹಲಿ ಪೊಲೀಸ್: ಆಮ್ ಆದ್ಮಿ ಖಂಡನೆ!

ಡಿ.ಸಿ.ಪ್ರಕಾಶ್

ದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ತಾನು ವಿರೋಧ ಪಕ್ಷವಾಗಿರುವ ರಾಜ್ಯಗಳಲ್ಲಿ ಹೇಗಾದರೂ ಮಾಡಿ, ಸರ್ಕಾರವನ್ನು ಉರುಳಿಸಿ, ಅಲ್ಲಿ ಅಧಿಕಾರವನ್ನು ಹಿಡಿಯಲು ನಾನಾ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿವೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ ಪಕ್ಷದ ಶಾಸಕರನ್ನು ಏಕನಾಥ್ ಶಿಂಧೆ ಮೂಲಕ ಖರೀದಿಸಿ ಸರ್ಕಾರವನ್ನು ಉರುಳಿಸಿತು.

ಹೀಗೆ ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಹೇಗಾದರು ಮಾಡಿ, ಅಡ್ಡದಾರಿಯಲ್ಲಿ ಅಧಿಕಾರವನ್ನು ಹಿಡಿಯಬೇಕು ಎಂದು ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಿವೆ.  ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವನ್ನು ಮಹಾರಾಷ್ಟ್ರ ಮಾದರಿಯಲ್ಲಿ ಕೆಡವಿ, ಅಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ನಾನಾ ಬಗೆಯ ತಂತ್ರಗಾರಿಕೆಗಳನ್ನು ಮಾಡುತ್ತಿವೆ.

ಅದರ ಭಾಗವಾಗಿ ದೆಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರಿಗೂ ಆಮಿಷಗಳನ್ನು ತೋರಿಸಲಾಯಿತು. ಆದರೆ, ಅವರು ಇದು ಯಾವುದಕ್ಕೂ ಬಗ್ಗದ ಕಾರಣ, ಅವರ ಮೇಲೆ ಭ್ರಷ್ಟಾಚಾರ ಹಗರಣ ಹೂಡಿ, ಸಿಬಿಐ ಬಂಧಿಸುವಂತೆ ಮಾಡಿತು. ಇವರ ಬಂಧನವನ್ನು ಎಲ್ಲಾ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿತು.

ಇದನ್ನೂ ಓದಿ: ಮನೀಶ್ ಸಿಸೋಡಿಯಾವನ್ನು ಅತ್ಯಂತ ಅಪಾಯಕಾರಿ ಕ್ರಿಮಿನಲ್‌ಗಳೊಂದಿಗೆ ಜೈಲಿನಲ್ಲಿ ಇರಿಸಲಾಗಿದೆ.

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಕೊನೆಗೊಂಡಿತು. ಇದರಿಂದ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ಸಿಬಿಐ, ವಿಶೇಷ ನ್ಯಾಯಾಲಯಕ್ಕೆ ಕರೆತಂದಿತು. ಆಗ ಮನೀಶ್ ಸಿಸೋಡಿಯಾ ಅವರ ಮುಂದೆ ಮುಗಿಬಿದ್ದ ಪತ್ರಕರ್ತರ ಜತೆ ಮಾತನಾಡಲು ಯತ್ನಿಸಿದಾಗ, ಭದ್ರತಾ ಕಾರ್ಯಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರು, ಅವರ ಕುತ್ತಿಗೆಯನ್ನು ಹಿಡಿದು ನ್ಯಾಯಾಲಯದ ಕೋಣೆಗೆ ಎಳೆದೊಯ್ದರು.

ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ; ಡಿಎಂಕೆ  ಖಂಡನೆ!

ಪೊಲೀಸರ ಈ ಕ್ರಮವನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ. ಮನೀಶ್ ಸಿಸೋಡಿಯಾ ಅವರನ್ನು ಹೀಗೆ ನಡೆಸಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದವರು ಯಾರು? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ, ದೆಹಲಿ ವಿಶೇಷ ನ್ಯಾಯಾಲಯವು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಜೂನ್ 1 ರವರೆಗೆ ವಿಸ್ತರಿಸಿದೆ.

Related Posts