ಇಮ್ರಾನ್ ಖಾನ್‌ಗೆ ಜೂನ್ 8 ರವರೆಗೆ ಜಾಮೀನು ಮುಂದುವರಿಕೆ! » Dynamic Leader
December 13, 2024
ವಿದೇಶ

ಇಮ್ರಾನ್ ಖಾನ್‌ಗೆ ಜೂನ್ 8 ರವರೆಗೆ ಜಾಮೀನು ಮುಂದುವರಿಕೆ!

ಇಸ್ಲಾಮಾಬಾದ್: ಅಲ್ ಖಾದಿರ್ ಟ್ರಸ್ಟ್ ಹಗರಣದ ಪ್ರಕರಣದಲ್ಲಿ, ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಳೆದ 9 ರಂದು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳದವು ಬಂದಿಸಿತ್ತು. ಅವರ ಬಂಧನವು ಕಾನೂನು ಬಾಹೀರ ಎಂದು ಹೇಳಿದ ಅಲ್ಲಿನ ಸುಪ್ರೀಂ ಕೋರ್ಟ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಲ್ಲಿನ ಹೈಕೋರ್ಟ್ ಗೆ ಆದೇಶ ನೀಡಿತ್ತು.

ಈ ಪ್ರಕರಣವು ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಇಮ್ರಾನ್ ಖಾನ್ ಅವರಿಗೆ ಎರಡು ವಾರಗಳ ಕಾಲ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನೀಡಿದ್ದ ಎರಡು ವಾರಗಳ ಜಾಮೀನ್ ಇಂದು ಮುಕ್ತಾಯಗೊಂಡಿದ್ದ ಹಿನ್ನಲೆಯಲ್ಲಿ ಈ ಪ್ರಕರಣವು ಮತ್ತೆ ಇಂದು ವಿಚಾರಣೆಗೆ ಬಂದಿತ್ತು.

ಇದನ್ನೂ ಓದಿ: ಅಸ್ಥಿರ ಪಾಕಿಸ್ತಾನ ಅಪಾಯಕಾರಿ: ಫಾರೂಕ್ ಅಬ್ದುಲ್ಲಾ ಅಭಿಪ್ರಾಯ!

ವಿಚಾರಣೆಯ ನಂತರ ಇಮ್ರಾನ್ ಖಾನ್ ಅವರ ವಿರುದ್ಧ ಆರೋಪಿಸಲಾಗಿದ್ದ 8 ಪ್ರಕರಣಗಳಲ್ಲಿ ಜೂನ್ 8 ರವರೆಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

 

Related Posts