ಆಪರೇಷನ್ ಕಮಲ ದೇಶದ ಆತ್ಮವನ್ನು ನಾಶಮಾಡುತ್ತದೆ: ಶರದ್‌ಪವಾರ್ » Dynamic Leader
September 18, 2024
ರಾಜಕೀಯ

ಆಪರೇಷನ್ ಕಮಲ ದೇಶದ ಆತ್ಮವನ್ನು ನಾಶಮಾಡುತ್ತದೆ: ಶರದ್‌ಪವಾರ್

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್‌ಪವಾರ್ ಅವರು ಮುಂಬೈ ಮರಾಠಾ ಮೂಲದ ಸಾಮಾಜಿಕ ಕಾರ್ಯಕರ್ತ ಭೌರಾವ್ ಪಾಟೀಲ್ ಅವರ 64ನೇ ಪುಣ್ಯತಿಥಿಯ ಅಂಗವಾಗಿ ಚತ್ತಾರದಲ್ಲಿರುವ ಅವರ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಶರದ್‌ಪವಾರ್, “ಸಹಿಷ್ಣುತೆ ಮತ್ತು ಜಾತ್ಯತೀತತೆ ನಮ್ಮ ದೇಶದ ಆತ್ಮ. ಆದರೆ ಬಿಜೆಪಿ ಆಪರೇಷನ್ ಕಮಲದ ಹೆಸರಿನಲ್ಲಿ ನಾಶ ಮಾಡುವ ನಿಲುವನ್ನು ತಳೆದಿದೆ. ಆಪರೇಷನ್ ಕಮಲ ದೇಶದ ಆತ್ಮವನ್ನು ನಾಶಮಾಡುತ್ತಿದೆ. ಬಿಜೆಪಿ ಧಾರ್ಮಿಕ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ.

ಡಾ.ಬಿ.ಅರ್.ಅಂಬೇಡ್ಕರ್ ಅವರೊಂದಿಗೆ ಭೌರಾವ್ ಪಾಟೀಲ್ ರವರು

ಆಡಳಿತ ಅಧಿಕಾರ ಸಿಗದಿದ್ದರೆ ಏನು ಬೇಕಾದರೂ ಮಾಡುವ ಬಿಜೆಪಿಯ ನೀತಿ ಅಪಾಯಕಾರಿ. ಇದು ಅಧಿಕಾರದ ಸಂಘರ್ಷವನ್ನು ಹೆಚ್ಚಿಸುತ್ತದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಇತರೆ ಪಕ್ಷಗಳ ಶಾಸಕರನ್ನು ಒಡೆದು ಸರ್ಕಾರ ರಚಿಸಿದೆ.

ಕರ್ನಾಟಕದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ಗೆ ಧಕ್ಕೆಯಾಗದ ರೀತಿಯಲ್ಲಿ ಸ್ಪರ್ಧಿಸುತ್ತಿದ್ದೇವೆ”. ಎಂದರು. 

Related Posts