Mann Ki Baat 100: ಪ್ರಧಾನಿ ಮೋದಿ ತಮ್ಮ ರೇಡಿಯೋ ಭಾಷಣದಿಂದ ಸಾಧಿಸಿದ್ದು ಏನು? » Dynamic Leader
December 4, 2024
ದೇಶ ರಾಜಕೀಯ

Mann Ki Baat 100: ಪ್ರಧಾನಿ ಮೋದಿ ತಮ್ಮ ರೇಡಿಯೋ ಭಾಷಣದಿಂದ ಸಾಧಿಸಿದ್ದು ಏನು?

ಡಿ.ಸಿ.ಪ್ರಕಾಶ್ ಸಂಪಾದಕರು

2014ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು `ಮನ್ ಕಿ ಬಾತ್’ (ಮನಸ್ಸಿನ ಧ್ವನಿ) ಹೆಸರಿನಲ್ಲಿ ರೇಡಿಯೋ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಪ್ರಧಾನಿ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ತಮ್ಮ 100ನೇ ಮನ್ ಕಿ ಬಾತ್ ಭಾಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 2014ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು `ಮನ್ ಕಿ ಬಾತ್’ ಹೆಸರಿನಲ್ಲಿ ರೇಡಿಯೋ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಇದರ 100ನೇ ಭಾಷಣವನ್ನು ಏಪ್ರಿಲ್ 30 ರಂದು ವಿಶ್ವಸಂಸ್ಥೆಯಿಂದ ಹಿಡಿದು ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದವರೆಗೆ ಆಚರಿಸಲಾಯಿತು. ಭಾರತವೊಂದರಲ್ಲೇ ಪ್ರಧಾನಿ ಮೋದಿಯವರ 100ನೇ ಭಾಷಣ ಸಾವಿರಾರು ಸ್ಥಳಗಳಲ್ಲಿ ಪ್ರಸಾರವಾಯಿತು.

ಹೀಗಿರುವಾಗ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಭಾಷಣದಿಂದ ಜನರಲ್ಲಿ ಆಗುವ ಪರಿಣಾಮಗಳೇನು? ಇದರಿಂದ ಪ್ರಧಾನಿ ಮೋದಿ ಏನನ್ನು ಸಾಧಿಸುತ್ತಿದ್ದಾರೆ? ಇದರ ಬಗ್ಗೆ ಕೆಲವು ಹಿರಿಯ ಬಿಜೆಪಿ ನಾಯಕರೊಂದಿಗೆ ಮಾತನಾಡಿದಾಗ,

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ಭಾರತೀಯ ಸಮುದಾಯದ ಸದಸ್ಯರು ಯುಎಸ್‌ನ ನ್ಯೂಜೆರ್ಸಿಯಲ್ಲಿ ಪ್ರಧಾನ ಮಂತ್ರಿಯವರ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯನ್ನು ಆಲಿಸಿದರು. ಪಿಟಿಐ

“ಈಶಾನ್ಯ ರಾಜ್ಯಗಳಿಂದ ಥಾರ್ ಮರುಭೂಮಿಯವರೆಗೆ, ಕಾರ್ಗಿಲ್ ಹಿಮ ಪ್ರದೇಶದಿಂದ ಕನ್ಯಾಕುಮಾರಿ ಸಮುದ್ರದ ಮೀನುಗಾರರವರೆಗೆ, ಪ್ರಧಾನಿ ಮೋದಿ ರೇಡಿಯೊ ಮೂಲಕ ಎಲ್ಲಾ ಪ್ರದೇಶಗಳ ಜನರನ್ನು ತಲುಪಿದ್ದಾರೆ. ಈ ಭಾಷಣದ ಮೂಲಕ ಸಮಾಜದ ಕಟ್ಟಕಡೆಯ ಜನರು ಮಾಡುವ ಒಳ್ಳೆಯ ಕೆಲಸಗಳನ್ನೂ ಸಾರ್ವಜನಿಕವಾಗಿ ಹೊಗಳಿದ್ದಾರೆ. ಸಾಮಾನ್ಯವಾಗಿ ನಾವು ರಾಷ್ಟ್ರದ ಹೆಮ್ಮೆಯನ್ನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರಿಗೆ ಹೋಲಿಕೆ ಮಾಡಿ ಹೆಚ್ಚು ಮಾತನಾಡುತ್ತೆವೆ. ಆದರೆ ಸಾಮಾಜಿಕವಾಗಿ ಕೆಳ ಹಂತದಲ್ಲಿರುವ ಜನರು ಹೇಗೆ ಅತ್ಯುತ್ತಮವಾಗಿದ್ದರೆ ಎಂಬುದರ ಕುರಿತು ಪ್ರಧಾನಿ ಮೋದಿ ಮಾತನಾಡುತ್ತಾರೆ.

ಕುಂಬಾರ, ಕ್ಷೌರಿಕ, ಮರವನ್ನು ನೆಟ್ಟ ಮುದುಕಿ, ಬಾಳೆಲೆಯಲ್ಲಿ ಕರಕುಶಲ ಮಾಡುವ ಮಹಿಳೆಯಂತೆ ಸರಳ ಜನರ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಅಭಿವೃದ್ಧಿ ಎಂದರೆ ತಪ್ಪು ಮಾಡಿದವರನ್ನು ಶಿಕ್ಷಿಸುವುದು ಮಾತ್ರವಲ್ಲ; ಒಳ್ಳೆಯವರನ್ನು ಪ್ರಶಂಶಿಸುವುದು ಕೂಡ. ಒಳ್ಳೆಯದನ್ನು ಮಾಡುವ ಸಾಮಾನ್ಯ ಜನರನ್ನು ಪ್ರಧಾನಿ ಮೋದಿ ಬಡಿದೆಬ್ಬಿಸುತ್ತಿದ್ದಾರೆ. ಇದು ಆ ಜನರಲ್ಲಿ ಭಾರೀ ಪ್ರಭಾವ ಮತ್ತು ಉತ್ಸಾಹವನ್ನು ಸೃಷ್ಟಿಸುತ್ತಿದೆ. ಪ್ರಧಾನಿಯವರ ವ್ಯಕ್ತಿತ್ವದ ಮೋಡಿ ಜನರನ್ನು ಆಕರ್ಷಿಸಿದೆ. ಇದೆಲ್ಲದಕ್ಕೂ ಮನ್ ಕಿ ಬಾತ್ ಭಾಷಣದ ಮೂಲಕ ಅವಕಾಶ ಕಲ್ಪಿಸಲಾಗಿದೆ” ಎಂದು ಹೇಳುತ್ತಾರೆ.

ದೆಹಲಿಯಲ್ಲಿ ರೈತರ ಹೋರಾಟ

ಪ್ರಧಾನಿಯಾಗಿ ದೇಶದ ಜನರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಹಾಗೂ ಒಳ್ಳೆಯ ವಿಷಯಗಳನ್ನು ಪ್ರಶಂಶಿಸಲು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ಮೂಲಕ ರೇಡಿಯೋ ಭಾಷಣ ಮಾಡುತ್ತಿರುವುದು ಒಂದು ಸಾಧನೆಯೇ; ಅದರಲ್ಲಿ ಎರಡು ಮಾತಿಲ್ಲ. ಆದರೆ, ಅವರ ಮಾತಿಗೂ ನಡವಳಿಕೆಗೂ ಯಾವುದೇ ಸಂಬಂಧವಿಲ್ಲ. ಅವರು ಜನರಿಗಾಗಿ ಮಾತನಾಡುತ್ತಿದ್ದಾರೆ ಎಂದರೆ, ರೈತರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ದೆಹಲಿಯಲ್ಲಿ ಒಂದು ವರ್ಷಕ್ಕೂ ಮೇಲಾಗಿ ಹೋರಾಟ ನಡೆಸುತ್ತಿದ್ದಾಗ ಅವರನ್ನು ಭೇಟಿ ಮಾಡಲಿಲ್ಲ. ಅವರ ಸಮಸ್ಯೆಯನ್ನೂ ಕೇಳಲಿಲ್ಲ. ಕನಿಷ್ಠ ಕೃಷಿ ಸಚಿವರನ್ನಾದರೂ ಅಲ್ಲಿಗೆ ಕಳುಹಿಸಿಕೊಡುವ ಆಲೋಚನೆ ಮಾಡಲಿಲ್ಲ.

ಕುಸ್ತಿ ಪಟುಗಳೊಂದಿಗೆ ಪ್ರಿಯಾಂಕಾ ಗಾಂಧಿ

ಈಗಲೂ ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ಪರದಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಲು ಕೂಡ ಪ್ರಧಾನಿ ಮೋದಿ ಸಿದ್ಧರಿಲ್ಲ! ಆದರೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೇಳಿದರು. ಅವರ ಜೊತೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನ ಹೇಳಿದರು.

1977ರಲ್ಲಿ ಬಿಹಾರದ ಬೆಲ್ಚಿಯಲ್ಲಿ ಇಂದಿರಾಗಾಂಧಿ

1977ರಲ್ಲಿ ಬಿಹಾರದ ಬೆಲ್ಚಿಯಲ್ಲಿ 10ಕ್ಕೂ ಹೆಚ್ಚು ದಲಿತರನ್ನು ಜಾತಿ ಭೂಮಾಲೀಕರ ಗುಂಪು ಗುಂಡಿಕ್ಕಿ ಕೊಂದಿತು. ಅಂದು ಇಂದಿರಾಗಾಂಧಿಯವರು ಅತಿವೃಷ್ಟಿ, ನದಿಯಲ್ಲಿನ ಪ್ರವಾಹ, ಕೆಸರುಮಯವಾದ ರಸ್ತೆ ಹೀಗೆ ನಾನಾ ಅಡೆತಡೆಗಳನ್ನು ದಾಟಿ 10 ಕಿ.ಮೀ.ಗೂ ಹೆಚ್ಚು ದೂರ ಆನೆಯ ಮೇಲೆ ಕುಳಿತು ಸಂತ್ರಸ್ತರ ಕುಟುಂಬದವರನ್ನು ಖುದ್ದಾಗಿ ಭೇಟಿ ಮಾಡಿ ಸಾಂತ್ವನ ಹೇಳಿದರು! ಅವರು ಆ ಜನರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿದರು. ರಾಜೀವ್ ಗಾಂಧಿ ಕೂಡ ಅದನ್ನೇ ಮಾಡಿದರು.

ರಾಹುಲ್ ಗಾಂಧಿ

ಆ ಸಾಲಿನಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಮೂಲಕ ದೇಶದ ಜನರನ್ನು ಖುದ್ದು ಭೇಟಿಯಾದರು. ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. “ಎಲ್ಲೆಲ್ಲಿ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೋ ಅಲ್ಲಲ್ಲೇ ಅವರ ಅಹವಾಲನ್ನು ಆಲಿಸಬೇಕು” ಎಂಬ ನೆಹರೂ ಕುಟುಂಬದ ಪರಂಪರೆಯೇ ಇದಕ್ಕೆಲ್ಲ ಮೂಲ ಕಾರಣ.

ಆದರೆ ಪ್ರಧಾನಿ ಮೋದಿಯವರು ಟಿವಿ ಮತ್ತು ಮನ್ ಕಿ ಬಾತ್ ರೇಡಿಯೊದಲ್ಲಿ ಮಾತ್ರ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಆದರೆ, ಅವರು ಜನರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಲು ಸಿದ್ಧರಿಲ್ಲ. ದೇಶದ ಚುನಾಯಿತ ಪ್ರಧಾನಿಗೆ ಪ್ರಜಾಪ್ರಭುತ್ವದ ಪ್ರಜ್ಞೆ ಇರಬೇಕು. ಸಂಸತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಸಂಸದರನ್ನು ಹೊಂದಿದ್ದಾರೆ. ಆದರೆ, ಅವರು ಸಂಸದೀಯ ಪ್ರಜಾಪ್ರಭುತ್ವವಾದಿಯಾಗಿಲ್ಲ! ಜನರಿಗೆ ಮೋದಿ ಮೇಲೆ ನಂಬಿಕೆ ಇಲ್ಲ. ಯಾಕೆಂದರೆ ಮೋದಿ ಪ್ರಜಾಪ್ರಭುತ್ವವಾದಿಯಲ್ಲ! ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ವಾಧಿಕಾರಿ!

Related Posts