ಯಲಹಂಕ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸಹಚರರಿಂದ ಹಲ್ಲೆ! » Dynamic Leader
December 4, 2024
ರಾಜಕೀಯ

ಯಲಹಂಕ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸಹಚರರಿಂದ ಹಲ್ಲೆ!

ಬೆಂಗಳೂರು: ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಪ್ರಚಾರ ಮಾಡಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬಿಜೆಪಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಶಾಸಕ ಎಸ್.ಆರ್.ವಿಶ್ವನಾಥ್ ಛೂ ಬಿಟ್ಟಿರುವ ಈ ಗೂಂಡಾಗಳು ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿಯ ವರೆಗೂ ದೌರ್ಜನ್ಯ ನಡೆಸಿದ್ದಾರೆ. ಬೊಮ್ಮಾಯ್ ಅವರೆ ಇದೇನು ಉತ್ತರ ಪ್ರದೇಶವೆ? ಸೋಲುವ ಭೀತಿಯಿಂದ ಬಿಜೆಪಿ ಇಂತಹ ಕೃತ್ಯಕ್ಕೆ ಇಳಿದಿದೆ. ನಳೀನ್ ಕುಮಾರ್ ಕಟೀಲ್ ಅವರೆ ಇದಲ್ಲವೆ ಬಿಜೆಪಿಯ ಗೂಂಡಾಗಿರಿ ಸಂಸ್ಕೃತಿ. ನಮ್ಮದು ಶಾಂತಿ ಮತ್ತು ಸಮಾನತೆಯ ದಾರಿಯಾಗಿದ್ದು, ನೀವೆಷ್ಟೇ ಪ್ರಚೋದಿಸಿದರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಗೂಂಡಾಗಿರಿಗೆ ಚುನಾವಣೆಯ ದಿನ ಮತದಾರರು ಉತ್ತರ ನೀಡಲಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ನಮ್ಮ ಕಾರ್ಯಕರ್ತರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಲಿದ್ದೇವೆ. ಅವರ ಗೂಂಡಾಗಿರಿಗೆ ನಾವು ಬೆದರುವುದಿಲ್ಲ; ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಬಾರಿ ಯಲಹಂಕಕ್ಕೆ ಮುನೇಗೌಡರೇ ಶಾಸಕ ಎಂದು ಜನರು ತೀರ್ಮಾನಿಸಿದ್ದಾರೆ. ಡಿಜಿಪಿ ಅವರೇ ದೌರ್ಜನ್ಯ ಎಸಗಿದ ಬಿಜೆಪಿಯ ಎಲ್ಲಾ ಗೂಂಡಾಗಳನ್ನೂ ಕಾನೂನಿನ ಕುಣಿಕೆಗೆ ತನ್ನಿ. ಎಂದು ಜೆಡಿಎಸ್ ಒತ್ತಾಯಿಸಿದೆ.  

Related Posts