ಬಿಜೆಪಿಯ ಪ್ರಚಾರ ವಾಹನಕ್ಕೆ ವರುಣಾ ಕ್ಷೇತ್ರದ ಸಾರ್ವಜನಿಕರು ಅಡ್ಡಿ; ಖಂಡಿಸಿದ ಸಿದ್ದರಾಮಯ್ಯ! » Dynamic Leader
October 5, 2024
ರಾಜಕೀಯ

ಬಿಜೆಪಿಯ ಪ್ರಚಾರ ವಾಹನಕ್ಕೆ ವರುಣಾ ಕ್ಷೇತ್ರದ ಸಾರ್ವಜನಿಕರು ಅಡ್ಡಿ; ಖಂಡಿಸಿದ ಸಿದ್ದರಾಮಯ್ಯ!

ಇಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಸತಿ ಸಚಿವ ವಿ.ಸೋಮಣ್ಣ ರವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸಿರುವುದಾಗಿ ವರದಿಯಾಗಿದೆ. ಬಿಜೆಪಿಯ ಪ್ರಚಾರ ವಾಹನವನ್ನು ಕಂಡ ವರುಣಾ ಕ್ಷೇತ್ರದ ಸಾರ್ವಜನಿಕರು ಕಲ್ಲುಗಳಿಂದ ಹೊಡೆದು ವಾಹನವನ್ನು ಓಡಿಸಿರುವ ವಿಡಿಯೋ ವೈರಲ್ ಆಗಿದೆ.

ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ. ವಾಹನಕ್ಕೆ ಬಿದ್ದ ಒಂದೊಂದು ಕಲ್ಲೆಟುಗಳೂ ಬಿಜೆಪಿಯ ಬೆಲೆ ಏರಿಕೆ, ಭ್ರಷ್ಟಾಚಾರ, ವಂಚನೆ, ದುರಾಡಳಿತಕ್ಕೆ ಸಿಕ್ಕ ಉತ್ತರಗಳು ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ತಮ್ಮ ಆಕ್ರೊಶವನ್ನು ವ್ಯಕ್ತ ಪಡಿಸಿದೆ.

ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿ, “ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ. ಇದನ್ನು ನಮ್ಮ‌ ಪಕ್ಷದ ಕಾರ್ಯಕರ್ತರು ಇಲ್ಲವೇ ಬೇರೆಯವರು ಮಾಡಿದ್ದರೆ ಅದು ಸರಿ ಅಲ್ಲ. ಎಲ್ಲ ಅಭ್ಯರ್ಥಿಗಳಿಗೂ ಮುಕ್ತ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಚಾರ ಮಾಡಲು ಅವಕಾಶ ಇದೆ. ಅದಕ್ಕೆ ಅಡ್ಡಿ ಪಡಿಸಬಾರದು. ಅಂತಿಮವಾಗಿ ಮತದಾರರು ತಮ್ಮ ಆಯ್ಕೆಯನ್ನು ತಾವೇ ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ. ಇದುವೇ ಒಬ್ಬ  ಜನನಾಯಕನಿಗೆ ಇರುವ ಗುಣಲಕ್ಷಣ; ಇದುವೇ ಪ್ರಜಾಪ್ರಭುತ್ವ; ಇದುವೇ ಸಂವಿಧಾನದ ಆಶಯ.

Related Posts