ಬೇಷರತ್ ಬೆಂಬಲಕ್ಕಾಗಿ ಜನರಿಗೆ ಧನ್ಯವಾದ ಹೇಳುತ್ತೇನೆ; ಮತ್ತು ಇನ್ನೊಂದು ಅವಧಿಗೆ ಸೇವೆ ಸಲ್ಲಿಸಲು ಆಶಿಸುತ್ತೇನೆ! ರಿಜ್ವಾನ್ ಅರ್ಷದ್ » Dynamic Leader
December 4, 2024
ರಾಜಕೀಯ

ಬೇಷರತ್ ಬೆಂಬಲಕ್ಕಾಗಿ ಜನರಿಗೆ ಧನ್ಯವಾದ ಹೇಳುತ್ತೇನೆ; ಮತ್ತು ಇನ್ನೊಂದು ಅವಧಿಗೆ ಸೇವೆ ಸಲ್ಲಿಸಲು ಆಶಿಸುತ್ತೇನೆ! ರಿಜ್ವಾನ್ ಅರ್ಷದ್

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಇಂದು ನಾಮ ಪತ್ರ ಸಲ್ಲಿಸಿದ್ದಾರೆ!

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಅಪಾರವಾದ ಅಭಿಮಾನಿಗಳೊಂದಿಗೆ ತೆರಳಿದ ಅವರು ವಸಂತನಗರ ಬಿಬಿಎಂಪಿ ಕಛೇರಿಯಲ್ಲಿ ತಮ್ಮ ನಾಮ ಪತ್ರವನ್ನು ಸಲ್ಲಿಸಿದರು.

“ಬೇಷರತ್ ಬೆಂಬಲಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ ಮತ್ತು ಇನ್ನೊಂದು ಅವಧಿಗೆ ನಾನು ಸೇವೆ ಸಲ್ಲಿಸಲು ಆಶಿಸುತ್ತೇನೆ” ಎಂದು ಕ್ಷೇತ್ರದ ಮತದಾರಲ್ಲಿ ವಿನಮ್ರತೆಯಿಂದ ಮನವಿ ಮಾಡಿದ್ದಾರೆ. 

“ಸೌಮ್ಯವಾದಿ ಹಾಗೂ ಶಾಂತಿ ಪ್ರಿಯನಾದ ರಿಜ್ವಾನ್ ಅರ್ಷದ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಅವರಿಗೆ ಈ ಬಾರಿಯೂ ಜಯವನ್ನು ತಂದು ಕೊಂಡುತ್ತದೆ” ಎಂದು ಕ್ಷೇತ್ರದ ಜನ ಹೇಳಿಕೊಳ್ಳುತ್ತಿದ್ದಾರೆ.

Related Posts