ವಸತಿ ಸಚಿವ ಸೋಮಣ್ಣಗೆ ಆಶೀರ್ವಾದ ಮಾಡದ ಚಾಮುಂಡೇಶ್ವರಿ ತಾಯಿ?
ಹೋಳಾಗಲಿಲ್ಲ ದೇವರ ಮುಂದೆ ಒಡೆದ ಈಡುಗಾಯಿ: ಸೋಮಣ್ಣಗೆ ಆಶೀರ್ವಾದ ಮಾಡಲಿಲ್ವಾ ಶ್ರೀ.ಚಾಮುಂಡೇಶ್ವರಿ ತಾಯಿ?
ಮೈಸೂರು: ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಸತಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಶ್ರೀ.ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ.ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆಯಲು ಯತ್ನಿಸಿದ ವಿ.ಸೋಮಣ್ಣ ಅವರಿಗೆ ಮುಜುಗರದ ಪರಿಸ್ಥಿತಿ ಎದುರಾಯಿತು. ಸೋಮಣ್ಣ ಹಾಕಿದ ಇಡುಗಾಯಿ ಒಡೆಯಲಿಲ್ಲ. ತೆಂಗಿನಕಾಯಿಯು ವ್ಯಕ್ತಿಯನ್ನು ದುಷ್ಟರಿಂದ ರಕ್ಷಿಸುತ್ತದೆ ಎಂದು ನಂಬಲಾಗುತ್ತಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವಾಗ ತೆಂಗಿನಕಾಯಿ ಒಡೆಯುವುದು ಹಿಂದೂ ಧರ್ಮದ ಪ್ರಮುಖ ಆಚರಣೆ. ತೆಂಗಿನಕಾಯಿ ಒಡೆಯದ ಕಾರಣ ಅಲ್ಲಿ ಸೇರಿದ್ದವರು ಅಶುಭ ಸೂಚನೆ ಎಂದು ಹೇಳಿಕೋಂಡರು.
ಇದರಿಂದ ಮುಜುಗರಕ್ಕೆ ಒಳಗಾದ ಸೋಮಣ್ಣ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಹೊರನಡೆದರು. ಅವರ ಜೊತೆಯಲ್ಲಿದ್ದ ಅವರ ಪತ್ನಿ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಇದಕ್ಕೆ ಸಾಕ್ಷಿಯಾದರು.