ಗೌರೀಬಿದನೂರು ತಾಲ್ಲೂಕು ಅಲ್ಪಸಂಖ್ಯಾತರ ಯುವ ಕಾರ್ಯದರ್ಶಿಯಾಗಿ ಅಬ್ಬಾಸ್ ರಜಾ ನೇಮಕ! » Dynamic Leader
December 4, 2024
ರಾಜಕೀಯ

ಗೌರೀಬಿದನೂರು ತಾಲ್ಲೂಕು ಅಲ್ಪಸಂಖ್ಯಾತರ ಯುವ ಕಾರ್ಯದರ್ಶಿಯಾಗಿ ಅಬ್ಬಾಸ್ ರಜಾ ನೇಮಕ!

ಗೌರೀಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆ, ಗೌರೀಬಿದನೂರು ತಾಲ್ಲೂಕು, ತೊಂಡೇಬಾವಿ ಹೋಬಳಿ, ಅಲ್ಲಿಪುರ ನಿವಾಸಿ ಅಬ್ಬಾಸ್ ರಜಾ ಅವರನ್ನು ರಾಜ್ಯ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಸೈಯದ್ ರೋಷನ್ ಅಬ್ಬಾಸ್ ರವರ ಆದೇಶದ ಮೇರೆಗೆ, ಗೌರೀಬಿದನೂರು ತಾಲ್ಲೂಕು ಅಲ್ಪಸಂಖ್ಯಾತರ ಯುವ ಕಾರ್ಯದರ್ಶಿಯಾಗಿ, ಗೌರೀಬಿದನೂರು ತಾಲ್ಲೂಕು ಅಧ್ಯಕ್ಷರಾದ ಸಿ.ಮಜುನಾಥ ರೆಡ್ಡಿ ರವರು ದಿನಾಂಕ: 03-04-2023 ರಂದು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ತತ್ ಕ್ಷಣದಿಂದಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಪಕ್ಷದ ಸಂಘಟನೆಯಲ್ಲಿ ಭಾಗವಹಿಸಬೇಕೆಂದು ಅವರಿಗೆ ಸೂಚಿಸಲಾಗಿದೆ. ಯುವಕರು, ಉತ್ಸಾಹಿಯೂ ಆಗಿರುವ ಅಬ್ಬಾಸ್ ರಜಾ ಜೆಡಿಎಸ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಪಂಚರತ್ನ ಯಾತ್ರೆಯ ಯಶಸ್ಸು ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿರುವ ನಾಡಿನ ಸ್ವಾಭಿಮಾನಿ ಮತದಾರರು ಈ ಬಾರಿ ಬದಲಾವಣೆಯನ್ನು ತರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಸಂಕಷ್ಟದಲ್ಲಿರುವ ಅಲ್ಪಸಂಖ್ಯಾತರ ಸಾಮಾಜಿಕ ಹಕ್ಕುಗಳಿಗಾಗಿ ಮತ್ತು ಗೌರೀಬಿದನೂರು ತಾಲ್ಲೂಕಿನ ಸರ್ವಜನರ ಏಳಿಗೆಗಾಗಿ ಒತ್ತುಕೊಟ್ಟು ಶ್ರಮಿಸಬೇಕೆಂದು ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಿ.ಮಜುನಾಥ ರೆಡ್ಡಿ ರವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿ ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಶಮವಹಿಸಬೇಕೆಂಬುದು ಸ್ಥಳೀಯರ ಆಶಯವಾಗಿದೆ.        

Related Posts