ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಛೇರಿಗೆ ಬಿಗಿ ಪೊಲೀಸ್ ಭದ್ರತೆ; ಜೆಡಿಎಸ್ ವ್ಯಂಗ್ಯ! » Dynamic Leader
December 4, 2024
ರಾಜಕೀಯ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಛೇರಿಗೆ ಬಿಗಿ ಪೊಲೀಸ್ ಭದ್ರತೆ; ಜೆಡಿಎಸ್ ವ್ಯಂಗ್ಯ!

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಛೇರಿಗೆ ಬಿಗಿ ಪೊಲೀಸ್ ಭದ್ರತೆ ಮಾಡಿರುವುದರ ಬಗ್ಗೆ ಜೆಡಿಎಸ್ ವ್ಯಂಗ್ಯವಾಡಿದೆ!

ಇದರ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ “ಈ ವರೆಗೂ ಬಿಜೆಪಿ ಯಾಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಎಂಬುವುದಕ್ಕೆ ಸಾಕ್ಷಿ ಸಿಕ್ಕಿದೆ. ‘ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲು ಕಚೇರಿಗೆ ಬಿಗಿ ಭದ್ರತೆ ಮಾಡಲಾಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರ ಉಳಿಸಲು ರೌಡಿಗಳನ್ನು, ಕ್ರಿಮಿನಲ್ ಗಳನ್ನು ಸಾಕಿಕೊಂಡಿದ್ದ ಬಿಜೆಪಿಗೆ ಅದುವೆ ತಲೆ ನೋವಾಗಿ ಪರಿಣಮಿಸಿದೆ.

Prime Minister Narendra Modi with Rowdy Sheeter Mallikarjuna alias Fighter Ravi

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ರೌಡಿಯೊಬ್ಬನಿಗೆ ಕೈಮುಗಿದಿದ್ದರು. ಇದೀಗ ಅವರ ಹೆಸರು ಹೇಳಿ ರೌಡಿಗಳು ಕೂಡಾ ಟಿಕೆಟ್ ಕೇಳುತ್ತಿರಬಹುದು. ಮೊದಲೆ ಕ್ರಿಮಿನಲ್ ಗಳ ಪಕ್ಷ, ಇದೀಗ ಹೊಸ ಕ್ರಿಮಿನಲ್ ಗಳ ಸೇರ್ಪಡೆಯಿಂದಾಗಿ, ಟಿಕೆಟ್ ಸಿಗದ ರೌಡಿಗಳ ಭಯದಿಂದ ಕಚೇರಿಗೆ ಬಿಗಿ ಭದ್ರತೆ ಮಾಡಿರಬಹುದು.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಪಕ್ಷದ ಕಚೇರಿಗೆ ನೂರಕ್ಕೂ ಹೆಚ್ಚು ಪೊಲೀಸರು ಇರುವ 2 KSRP ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಅಂದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಎಷ್ಟೊಂದು ಡೇಂಜರ್ಸ್ ಆಗಿರಬೇಕಲ್ಲವೇ” ಎಂದು ವ್ಯಂಗ್ಯವಾಡಿದೆ. Karnataka Congress says PM Modi made to fold hands before ‘rowdy sheeter’

Related Posts