ದುಬೈ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ರೂ ಪರಿಹಾರ! » Dynamic Leader
October 11, 2024
ವಿದೇಶ

ದುಬೈ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ರೂ ಪರಿಹಾರ!

ಭಾರತೀಯನಾದ ಮೊಹಮ್ಮದ್ ಬೇಗೆ ಮಿರ್ಜಾ (20) ಎಂಜಿನಿಯರಿಂಗ್ ಓದುತ್ತಿದ್ದನು. ಕಳೆದ 2019ರಲ್ಲಿ, ದುಬೈನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಮೊಹಮ್ಮದ್, ಓಮನ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 31 ಪ್ರಯಾಣಿಕರಲ್ಲಿ 17 ಮಂದಿ ಸಾವನ್ನಪ್ಪಿದರು. ಈ ಪೈಕಿ 12 ಮಂದಿ ಭಾರತೀಯರು. ಮಹಮ್ಮದ್ ಸೇರಿದಂತೆ ಹಲವರಿಗೆ ಗಂಭೀರವಾದ ಗಾಯಗಳಾದವು. ಅಪಘಾತಕ್ಕೆ ಕಾರಣವಾದ ಬಸ್ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅಪಘಾತದ ಸಂತ್ರಸ್ತರಿಗೆ 3.4 ಮಿಲಿಯನ್ ದಿರ್ಹಮ್ ಪಾವತಿಸಲು ಆದೇಶಿಸಲಾಯಿತು.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೊಹಮ್ಮದ್ ಎರಡು ತಿಂಗಳಿಗೂ ಹೆಚ್ಚು ಕಾಲ ದುಬೈನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು. ಆತನು 14 ದಿನಗಳ ಕಾಲ ಪ್ರಜ್ಞಾಹೀನರಾಗಿದ್ದನು. ಆ ಬಳಿಕ ಪುನರ್ವಸತಿ ಕೇಂದ್ರದಲ್ಲಿಯೂ ಚಿಕಿತ್ಸೆ ಪಡೆದಿದ್ದ.

ಅಪಘಾತದಲ್ಲಿ ಮೊಹಮ್ಮದ್ ಮಿದುಳಿಗೆ ತೀವ್ರ ಪೆಟ್ಟು ಬಿದ್ದ ಕಾರಣದಿಂದ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಆತನ ತಲೆಬುರುಡೆ, ಕಿವಿ, ಬಾಯಿ, ಶ್ವಾಸಕೋಶಗಳು, ತೋಳುಗಳು ಮತ್ತು ಕಾಲುಗಳಿಗೆ ಆಗಿರುವ ಗಾಯಗಳನ್ನೂ ವಿಧಿವಿಜ್ಞಾನ ವೈದ್ಯಕೀಯ ತಜ್ಞರು ಮೌಲ್ಯಮಾಪನ ಮಾಡಿಸಿದರು.

ಮೊಹಮ್ಮದ್‌ಗೆ ಶೇಕಡಾ 50ರಷ್ಟು ಮಿದುಳು ಶಾಶ್ವತ ಹಾನಿಯಾಗಿದೆ ಎಂಬ ವರದಿಯನ್ನು ಆಧರಿಸಿ, ಯುನೈಟೆಡ್ ಅರಬ್ ಎಮಿರೇಟ್ಸ್‌ ಸುಪ್ರೀಂ ಕೋರ್ಟ್ ಪರಿಹಾರವನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿದೆ.

ಅದರಂತೆ ಮೊಹಮ್ಮದ್ ಗೆ 11 ಕೋಟಿ ರೂ.ಪರಿಹಾರ ನೀಡುವಂತೆ ಆದೇಶಿಸಲಾಗಿದೆ.   

Related Posts