ಮೋದಿ ಎಂಬ ಹೆಸರಿನ ಸಮುದಾಯವೇ ಇಲ್ಲ; ರಾಹುಲ್ ಪರ ವಕೀಲ ಕಿರಿತ್ ಪನ್ವಾಲಾ ಬಯಲು! » Dynamic Leader
December 4, 2024
ರಾಜಕೀಯ

ಮೋದಿ ಎಂಬ ಹೆಸರಿನ ಸಮುದಾಯವೇ ಇಲ್ಲ; ರಾಹುಲ್ ಪರ ವಕೀಲ ಕಿರಿತ್ ಪನ್ವಾಲಾ ಬಯಲು!

ಡಿ.ಸಿ.ಪ್ರಕಾಶ್ ಸಂಪಾದಕರು

ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುಕ್ಕೆ ದೇಶಾದ್ಯಂತ ಬಾರೀ ಸಂಚಲನ ಮೂಡಿಸಿದೆ. ಕರ್ನಾಟಕದ ಕೋಲಾರದಲ್ಲಿ 2019ರ ಸಂಸತ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ‘ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಹೆಸರಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ಗುಜರಾತ್ ಬಿಜೆಪಿಯ ಮಾಜಿ ಶಾಸಕ ಪೂರ್ಣೇಶ್ ಮೋದಿ, ‘ರಾಹುಲ್ ಗಾಂಧಿ ಭಾಷಣವು ಮೋದಿ ಸಮುದಾಯವನ್ನು ತಪ್ಪಾಗಿ ವರ್ಗೀಕರಿಸುತ್ತದೆ’ ಎಂದು ರಾಹುಲ್ ಗಾಂಧಿಯ ವಿರುದ್ಧ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

ಪ್ರಕರಣದ ವಿಚಾರಣೆಗೆ ಆರಂಭದಲ್ಲಿ ತಡೆ ನೀಡಲಾಗಿತ್ತು. ಆಗ ಅಂದಿನ ನ್ಯಾಯಾಧೀಶ ಎ.ಕೆ.ದೇವ್ ಅವರನ್ನು ಪ್ರಕರಣದಿಂದ ವರ್ಗಾವಣೆ ಮಾಡಿ ಪ್ರಕರಣಕ್ಕೆ ಹರೀಶ್ ವರ್ಮಾ ಎಂಬ ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಆ ಬಳಿಕ ಪ್ರಕರಣದ ಮೇಲಿನ ತಡೆ ಹಿಂಪಡೆದು ತನಿಖೆ ಆರಂಭಿಸಲಾಗಿತ್ತು. ತನಿಖೆಯ ಕೊನೆಯಲ್ಲಿ, ರಾಹುಲ್ ಗಾಂಧಿಯನ್ನು ಅಪರಾಧಿ ಎಂದು ಘೋಷಿಸಿದ ಸೂರತ್ ನ್ಯಾಯಾಲಯವು, ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ಮತ್ತು ಜಾಮೀನು ಪಡೆಯಲು ಒಂದು ತಿಂಗಳ ಕಾಲಾವಕಾಶ ನೀಡಿತು.

ಕಿರಿತ್ ಪನ್ವಾಲಾ

ತೀರ್ಪಿನ ಮರುದಿನ, ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಮತ್ತು ಮುಂದಿನ 8 ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಲೋಕಸಭೆ ಕಾರ್ಯದರ್ಶಿ ಘೋಷಿಸಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶಾದ್ಯಂತ ಹರಡಿತು. ಕೇಂದ್ರ ಸರ್ಕಾರದ ಈ ಕ್ರಮ ರಾಜಕೀಯ ಸೇಡಿನ ಕೃತ್ಯ ಎಂದು ಹಲವರು ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿಗೆ ನೀಡಿರುವ ಶಿಕ್ಷೆ ಹಾಗೂ ಸಂಸದ ಸ್ಥಾನದಿಂದ ಅನರ್ಹ ಗೊಳಿಸಿರುವುದರ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಪರ ವಕೀಲ ಕಿರಿತ್ ಪನ್ವಾಲಾ, “ಈ ಪ್ರಕರಣದಲ್ಲಿ ಉಲ್ಲೇಖಿಸಿರುವ ಶೇ.90ರಷ್ಟು ಆರೋಪಗಳು ನರೇಂದ್ರ ಮೋದಿ ವಿರುದ್ಧವೇ ಆಗಿವೆ. ವ್ಯಕ್ತಿಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ನಿರ್ದಿಷ್ಟ ವ್ಯಕ್ತಿಗೆ ಅನುಮತಿ ಇದೆ ಎಂದು ಕಾನೂನು ಹೇಳುತ್ತದೆ. ಆದರೆ ನರೇಂದ್ರ ಮೋದಿ ಈ ಪ್ರಕರಣ ದಾಖಲಿಸುವ ಬದಲು ಗುಜರಾತ್‌ನಲ್ಲಿರುವ ಪೂರ್ಣೇಶ್ ಮೋದಿ ದೂರು ದಾಖಲಿಸಿದ್ದಾರೆ.

ಒಂದು ಸಾಲು ಮಾತನಾಡಿದರೆ ಎರಡು ವರ್ಷ ಶಿಕ್ಷೆಯೇ? ಇಂತಹ ಹಲವಾರು ಪ್ರಕರಣಗಳ ಸ್ಥಿತಿಯನ್ನು ನಾನು ಪರಿಶೀಲಿಸಿದ್ದೇನೆ. ಯಾವುದೇ ಉನ್ನತ ನ್ಯಾಯಾಲಯಗಳು ಇಂತಹ ಶಿಕ್ಷೆ ನೀಡಿಲ್ಲ. ಬದಲಾಗಿ ಆರೋಪಿಗೆ ಮೌಖಿಕವಾಗಿ ಛೀಮಾರಿ ಹಾಕುವುದು ಅಥವಾ ನಾಮಮಾತ್ರ ಶಿಕ್ಷೆ ಅಥವಾ ದಂಡ ಇರುತ್ತದೆ. ಆದರೆ ರಾಹುಲ್ ಗಾಂಧಿ ವಿರುದ್ಧದ ಈ ಮಾನನಷ್ಟ ಮೊಕದ್ದಮೆಯಲ್ಲಿ ಹಾಗಾಗಲಿಲ್ಲ. ‘ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಹೆಸರು ಹೇಗೆ ಇದೆ’ ಎಂದು ರಾಹುಲ್ ಗಾಂಧಿ ಹೇಳಿದಾಗ, ಮೋದಿ ಸಮುದಾಯವನ್ನೇ ಉಲ್ಲೇಖಿಸುತ್ತಿದ್ದಾರೆ ಎಂದು ಅವರು ಊಹಿಸಿದ್ದಾರೆ. ಆದರೆ ವಾಸ್ತವದಲ್ಲಿ ಮೋದಿ ಎಂಬ ಹೆಸರಿನ ಸಮುದಾಯವೇ ಇಲ್ಲ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಇಲ್ಲ. ಮೋಧ್ ವನಿಕ್ (Modh Vanik) ಮತ್ತು ಮೋಧ್ ಘಂಚಿ (Modh-Ghanchi) ಎಂಬ ಸಮುದಾಯಗಳು ಮಾತ್ರವೇ ಇದೆ. ಮೋದಿ ಸಮಾಜವೆಂಬುದು ಯಾವುದೂ ಇಲ್ಲ. ಹಾಗೊಂದು ಸಮಾಜವೇ ಇಲ್ಲವೆನ್ನುವಾಗ, ಆ  ಸಮಾಜದ ಪ್ರತಿನಿಧಿಯೆಂದು ಹೇಳಿಕೊಂಡ ಒಬ್ಬರು ಹೇಗೆ ದೂರು ಕೊಡಲು ಸಾಧ್ಯ?

ಅದಿಲ್ಲದೇ ಮೋದಿ ಎಂಬ ಹೆಸರನ್ನು ಹೊಂದಿರುವವರು 13 ಕೋಟಿ ಜನರು ಇದ್ದಾರೆ. ಕಾನೂನಿನ ಪ್ರಕಾರ ಗುರುತಿಸಲು ಸಾಧ್ಯವಾಗದ ಸಾಮುದಾಯವಾಗಿ ಇರುವಾಗ ಇವರಿಂದ ದೂರು ನೀಡಲು ಸಾಧ್ಯವಿಲ್ಲ. ಈ ರೀತಿಯ ವಿವಿಧ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ಹಲವು ತೀರ್ಪುಗಳನ್ನು ನೀಡಿದೆ. ದೂರುದಾರರು ಮೋಧ್ ವನಿಕ್ ಸಮುದಾಯವನ್ನೇ ಮೋದಿ ಸಮುದಾಯವೆಂದು ಭಾವಿಸಿಕೊಂಡಿದೆ. ಆದರೆ ರಾಹುಲ್ ಗಾಂಧಿ, ‘ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಕಳ್ಳರೆಲ್ಲಾ ಯಾಕೆ ಮೋದಿ ಎಂಬ ಉಪನಾಮ ಹೊಂದಿರುವವರು’ ಎಂದು ಹೇಳಿದಾಗ, ‘ಈ ಕಳ್ಳರು’ ಎಂಬ ಪದವನ್ನು ತಪ್ಪಾಗಿ ಕೈಬಿಟ್ಟಿದ್ದರಿಂದ, ಇದನ್ನು ಗಮನದಲ್ಲಿಟ್ಟುಕೊಂಡು ಪ್ರಕರಣ ದಾಖಲಿಸಲಾಗಿದೆ” ಎಂದು ವಕೀಲ ಕಿರಿತ್ ಪನ್ವಾಲಾ ಹೇಳಿದ್ದಾರೆ.

ಮೋದಿ ಎಂಬ ಹೆಸರಿನ ಸಮುದಾಯವೇ ಇಲ್ಲ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಇಲ್ಲ. ಮೋಧ್ ವನಿಕ್ (Modh Vanik) ಮತ್ತು ಮೋಧ್ ಘಂಚಿ (Modh-Ghanchi) ಎಂಬ ಸಮುದಾಯಗಳು ಮಾತ್ರವೇ ಇದೆ. ಮೋದಿ ಸಮಾಜವೆಂಬುದು ಯಾವುದೂ ಇಲ್ಲ. ಹಾಗೊಂದು ಸಮಾಜವೇ ಇಲ್ಲವೆನ್ನುವಾಗ, ಆ  ಸಮಾಜದ ಪ್ರತಿನಿಧಿಯೆಂದು ಹೇಳಿಕೊಂಡ ಒಬ್ಬರು ಹೇಗೆ ದೂರು ಕೊಡಲು ಸಾಧ್ಯ?

Related Posts