ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಶೀಘ್ರದಲ್ಲೇ ಮತ್ತೊಂದು ಬಾಂಬ್ ಸಿಡಿಸುವುದಾಗಿ ಇಂದು ಘೋಷಣೆ! » Dynamic Leader
December 13, 2024
ದೇಶ

ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಶೀಘ್ರದಲ್ಲೇ ಮತ್ತೊಂದು ಬಾಂಬ್ ಸಿಡಿಸುವುದಾಗಿ ಇಂದು ಘೋಷಣೆ!

ಅಮೆರಿಕ ಮೂಲದ ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆ ಕಳೆದ ಜನವರಿಯಲ್ಲಿ ವರದಿಯೊಂದನ್ನು ಪ್ರಕಟಿಸಿ, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹಕ್ಕೆ ಸೇರಿದ 7 ಕಂಪನಿಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಅವಾಸ್ತವಿಕವಾಗಿ ತೋರಿಸಿ ಷೇರು ಮಾರುಕಟ್ಟೆಯನ್ನು ವಂಚಿಸಿ ಲಾಭ ಮಾಡಿಕೊಳ್ಳುತ್ತಿವೆ’ ಎಂಬ ವರದಿಯನ್ನು ಬಿಡುಗಡೆಗೊಳಿಸಿ ದೇಶಾದ್ಯಂತ ಬಾರಿ ಸಂಚಲನವನ್ನು ಉಂಟು ಮಾಡಿತು. ವಿದೇಶಗಳಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಿ ಅಕ್ರಮ ಹಣದ ವಹಿವಾಟು ನಡೆಸುತ್ತಿದ್ದಾರೆ ಎಂದೂ ತನಿಖಾ ವರದಿಯಲ್ಲಿ ಆರೋಪ ಮಾಡಿತ್ತು. ಹಿಂಡೆನ್‌ಬರ್ಗ್ ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳನ್ನು ಕುಸಿಯುವಂತೆ ಮಾಡಿತು. ಅದಾನಿ ಗ್ರೂಪ್‌ನಲ್ಲಿನ ಹೂಡಿಕೆಯಿಂದ ಸಾರ್ವಜನಿಕ ವಲಯದ ಉದ್ಯಮಗಳು ಭಾರೀ ನಷ್ಟವನ್ನು ಅನುಭವಿಸಿದವು.

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿ ಸಂಸತ್ತನ್ನು ಸ್ತಬ್ಧಗೊಳಿಸುತ್ತಿವೆ. ಅದಾನಿ ಸಮೂಹದ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿಗೆ ಆದೇಶಿಸಬೇಕು ಎಂದು ಒತ್ತಾಯಿಸುತ್ತಲೇ ಇದೆ. ಸುಪ್ರೀಂ ಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಶೀಘ್ರದಲ್ಲೇ ಮತ್ತೊಂದು ಬಾಂಬ್ ಸಿಡಿಸುವುದಾಗಿ (ವರದಿಯನ್ನು ಪ್ರಕಟಿಸುವುದಾಗಿ) ಇಂದು ಘೋಷಿಸಿದೆ. ಈ ಘೋಷಣೆಯಿಂದ ಮತ್ತೆ ಸಂಚಲನ ಮೂಡಿಸಿದೆ. ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯ ವರದಿ ಭಾರತೀಯ ಕಂಪನಿಗಳ ಬಗ್ಗೆಯೇ ಅಥವಾ ಅಮೆರಿಕ ಬ್ಯಾಂಕುಗಳ ಬಗ್ಗೆಯೇ? ಎಂದು ಕುತೂಹಲ ಮೂಡಿಸಿದೆ. ಕಾದು ನೋಡೋಣ!

Hindenburg Research Promises Another Bombshell Report:
On March 23, Hindenburg Research, an investment research firm, announced that it will soon be releasing a new report. This announcement comes two months after the firm published a report claiming that India’s Adani Group had engaged in a stock manipulation and accounting fraud scheme over several decades.

Related Posts