ಕನಕಗಿರಿ ಕ್ಷೇತ್ರದ ದಡೆಸೂಗುರು ರಾಜಕೀಯ ಜಿಂದಗಿ ಖತಮ್ ಆಗಲಿದೆಯೇ? » Dynamic Leader
October 12, 2024
ರಾಜಕೀಯ

ಕನಕಗಿರಿ ಕ್ಷೇತ್ರದ ದಡೆಸೂಗುರು ರಾಜಕೀಯ ಜಿಂದಗಿ ಖತಮ್ ಆಗಲಿದೆಯೇ?

ವರದಿ: ರಾಮು ನೀರಮಾನ್ವಿ

ಕೊಪ್ಪಳ ಜಿಲ್ಲೆ, ಕನಕಗಿರಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ವಿಧಾನಸಭೆ ಚುನಾವಣೆಯ ಬಿಸಿ ಕಾವು ಬಿಸಿಲಿನಂತೆ ಹೆಚ್ಚಾಗುತ್ತಿದೆ. ವಿವಿಧ ಪಕ್ಷಗಳ MLA ಕ್ಯಾಂಡಿಡೇಟ್ ಗಳು ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅಡಳಿತರೂಡ ಬಿಜೆಪಿ ಶಾಸಕ ಬಸವರಾಜ ದಡೆಸೂಗುರು ಪಕ್ಷದ ಕಾರ್ಯಕರ್ತರ ಅವಕೃಪೆಗೆ ಒಳಗಾಗಿದ್ದಾರೆ. ಬರುವ ಚುನಾವಣೆಯಲ್ಲಿ ದಡೆಸೂಗುರುಗೆ ಟಿಕೆಟ್ ಸಿಗುವುದು ತುಂಬಾ ವಿರಳವಾಗಿದೆ? ಒಂದು ವೇಳೆ ದಡೆಸೂಗುರುಗೆ ಮತ್ತೆ ಟಿಕೆಟ್ ಕೊಟ್ಟರೆ ಆ ಪಕ್ಷದ ಕಾರ್ಯಕರ್ತರೆ ಅವರನ್ನು ಸೋಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ ಎಂಬ ಸುದ್ದಿ ಎಲ್ಲೆಡೆಯು ವ್ಯಾಪಕವಾಗಿ ಹರಿದಾಡುತ್ತಿದೆ. RSSನ ಆಂತರಿಕ ಸಮೀಕ್ಷೆಯಲ್ಲಿ ದಡೆಸೂಗುರು ಬಸವರಾಜ ಸೋಲುವುದು ಖಚಿತ ಎಂಬುದು ದೃಢಪಟ್ಟಿದ್ದು, ಪಕ್ಷದ ಹೈಕಮಂಡ್ಗೆ ಸುದ್ದಿ ರವಾನಿಸುವ ಮೂಲಕ ಎಚ್ಚರಿಕೆಯಿ ಹೆಜ್ಜೆಯನ್ನು ಇಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿಯೂ ಇದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಕೆಜಿಪಿ ಪಕ್ಷ ರಚನೆ ಮಾಡಿದಾಗ, ಅವರ ಹಿಂದೆ ಬಸವರಾಜ ಪಲಾಯನ ಮಾಡಿದರು. ಮತ್ತೆ ಯಡಿಯೂರಪ್ಪನವರು ಬಿಜೆಪಿ ಸೇರಿಕೊಂಡಾಗ ಅವರೂ ಬಂದು ಸೇರಿಕೊಂಡರು. ಅವರ ಪಕ್ಕ ಬೆಂಬಲಿಗನೆಂದು ಗುರುತಿಸಿಕೊಂಡಿದ್ದ ದಡೆಸೂಗುರುಗೆ ಕಳೆದ 2018ರಲ್ಲಿ ಯಡಿಯೂರಪ್ಪನ ಕೃಪೆಯಿಂದಾಗಿ ಕನಕಗಿರಿ ಕ್ಷೇತ್ರದಲ್ಲಿ ಟಿಕೆಟ್ ಪಡೆದುಕೊಂಡರು. ಈ ಹಿಂದೆ ದಡೆಸೂಗುರು ಒಂದು ಸಾರಿ ಚುನಾವಣೆಯಲ್ಲಿ ಸೋತ ಅನುಕಂಪದ ಅಲೆಯಿಂದಾಗಿ ಕ್ಷೇತ್ರದ ಮತದಾರರು ಮತ್ತೆ ಅವರಿಗೆ ಆಶೀರ್ವಾದ ಮಾಡಿದರು. ಆದರೆ, ಗೆದ್ದು ಬೀಗಿದ ಶಾಸಕ ದಡೆಸೂಗುರು ನಂತರ ತನ್ನನ್ನು ಗೆಲ್ಲಿಸಿದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಕಾರ್ಯಕರ್ತರನ್ನು ಕಡೆಗಣಿಸಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೆ, ಕೇವಲ ಸ್ವಯಂ ಅಭಿವೃದ್ಧಿ ಮಾಡಿಕೊಳ್ಳವ ಕೆಲಸದಲ್ಲೆ ತಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಂಡರು. ಇದರಿಂದಾಗಿ ಪಕ್ಷದ ನಿಷ್ಟವಂತ ಕಾರ್ಯಕರ್ತರು ಅವರ ವಿರುದ್ಧ ಸಿಡಿದೇಳುವ ಪರಿಸ್ಥಿತಿಗೆ ತಳ್ಳಲ್ಪಟ್ಟರು. ಒಂದಲ್ಲಾ ಎರಡಲ್ಲ ಹಲವಾರು ಹಗರಣಗಳಲ್ಲಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಪಕ್ಷದ ಮಾನವನ್ನು ಕನಕಗಿರಿ ಕ್ಷೇತ್ರದಲ್ಲಿ ಹರಾಜು ಹಾಕಿದ್ದು, ಕರ್ನಾಟಕದ ತುಂಬಾ ಸುದ್ದಿ ಹರಡಿ ವೈರಲ್ ಅಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಒಂದು ಕಡೆ ಪಕ್ಷದ ಹೈಕಮಂಡ್ ಗೆ ದಡೆಸೂಗುರು ಬಿಸಿ ತುಪ್ಪವಾಗಿದ್ದಾರೆ. ಕನಕಗಿರಿ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಬಸವರಾಜ ಹೆಸರು ಕೇಳಿದರೆ ಚಂಗನೆ ನೆಗೆಯುತ್ತಿದ್ದಾರೆ. ಈ ಸಾರಿ ಹೇಗಾದರೂ ಟಿಕೆಟ್ ಕೈ ತಪ್ಪುವಂತೆ ಮಾಡಿ, ಬೇರೆ ಹೊಸ ಮುಖಕ್ಕೆ ಮನ್ನಣೆ ನೀಡುವಂತೆ ಕಾರ್ಯಕರ್ತರು ಬಿಜೆಪಿಯಲ್ಲಿ ಬೇಡಿಕೆಯನ್ನು ಇಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಮರೆತಿದ್ದ ಶಾಸಕರು, ಈಗ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವುದನ್ನು ಕಂಡು ಜನ ತೆರೆಮರೆಯಲ್ಲಿ ಮುಸಿಮುಸಿ ನಗುತ್ತಿದ್ದಾರೆ. ‘ಕಳೆದ ಚುನಾವಣೆಯಲ್ಲಿ ಇವರ ಗೆಲುವಿಗೆ ತನು ಮನ ದನ ಎಲ್ಲವನ್ನೂ ಸಹಾಯ ಮಾಡಿ, ಗೆಲ್ಲಿಸಿದ ನಮ್ಮನ್ನು ಕಾಲ ಕಸದಂತೆ ಕಂಡ ಬಸವರಾಜ ದಡೆಸೂಗುರುಗೆ ನಾವು ತಕ್ಕ ಉತ್ತರ ಕೊಡುವ ಮೂಲಕ ಅಂತರಾಳದ ಬೇಗೆಯನ್ನು ತಣಿಸಿಕೊಳ್ಳುತ್ತೇವೆ’ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಈ ಸಾರಿ ಬಿಜೆಪಿ ಗೆಲ್ಲುವುದು ಕನಸಿನ ಮಾತಾಗಿದೆ ಎಂಬ ಸುದ್ದಿ ಕನಕಗಿರಿ ಕ್ಷೇತ್ರದಲ್ಲಿ ವೈರಲ್ ಆಗಿದೆ. ಒಂದು ಕಡೆ ಹೈಕಮಂಡ್ ಹಾಗೂ ಕಾರ್ಯಕರ್ತರಿಗೆ ಬೇಡವಾಗಿರುವ ಬಸವರಾಜ ದಡೆಸೂಗುರು ಈ ಸಾರಿ ಸ್ಪರ್ದಿಸಿದರೆ ಸೋಲುವುದು ಖಚಿತ ಎಂಬುದೇ ಸ್ಥಳೀಯರ ಮಾತು. ‘ಒಂದು ವೇಳೆ ಬರುವ ಚುನಾವಣೆಯಲ್ಲಿ ಈತನು ಟಿಕೆಟ್ ಪಡೆದು ಚುನಾವಣೆಯಲ್ಲಿ ಗಿಮಿಕ್ ಮಾಡಿ ಸ್ಪರ್ಧಿಸಲು ಮುಂದಾದರೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ದಡೆಸೂಗುರು ಬಸವರಾಜನಿಗೆ ಎಲ್ಲಾ ಕಡೆಯಿಂದ ಮೈನಸ್ ಇದೆ. ಈಗಾದರೆ ಬಸವರಾಜನ ರಾಜಕೀಯ ಜಿಂದಗೀ ಖತಮ್ ಅಗುವುದು ಬಹುತೇಕ ಖಚಿತವಾಗಿದೆ. ‘ಮನುಷ್ಯನ ಅಹಂಕಾರ ಸೊಕ್ಕು ಅವನ ಅವನತಿಗೆ ಕಾರಣ’ ಎಂಬ ಮಾತು ಎಷ್ಟು ಸತ್ಯದದ್ದು. ಕಾಲಾಯ ತಸ್ಮೈ ನಮಃ.

Related Posts