KMU ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರು ಆಯ್ಕೆ! » Dynamic Leader
December 4, 2024
ರಾಜ್ಯ

KMU ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರು ಆಯ್ಕೆ!

ಚಿತ್ರದುರ್ಗ: ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಮಾರ್ಚ್ 15 ರಂದು ಚಿತ್ರದುರ್ಗದ ಅಹ್ಮದ್ ಪ್ಯಾಲೆಸ್ ನಲ್ಲಿ ನಡೆಯಿತು. ರಾಜ್ಯಾಧ್ಯಕ್ಷರಾದ ಅಬ್ದುಲ್ ಸತ್ತಾರ್ ಬೆಂಗಳೂರು, ರಾಜ್ಯ ಉಪಾಧ್ಯಕ್ಷರಾದ ನಾಸೀರ್ ಇಂಪಾಲ್ ಚಿಕ್ಕಮಗಳೂರು, ಕಾರ್ಯಾಧ್ಯಕ್ಷರಾದ ಜಿ.ಎ.ಬಾವಾ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್, ಉತ್ತರ ಕರ್ನಾಟಕ ಸಂಚಾಲಕರಾದ ಜಬ್ಬಾರ್ ಕಲಬುರ್ಗಿ, ದಕ್ಷಿಣ ಕರ್ನಾಟಕ ಸಂಚಾಲಕರಾದ ಅಬ್ದುಲ್ ವಾಹಿದ್ ಮಾಗುಂಡಿ ಸೇರಿದಂತೆ ಸಂಘಟನಾ ಕಾರ್ಯದರ್ಶಿ ಜಾಬೀರ್ ತಂಙಳ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದ ಈ ಸಮಾಲೋಚನ ಸಭೆಯಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಸೈಯದ್ ನದೀಮ್ ಹಾಗು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಾದಿಕ್ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯದ ಮುಸ್ಲಿಮರ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ KMU ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸಮಾವೇಶದಲ್ಲಿ ಕರ್ನಾಟಕ ಮುಸ್ಲಿಮ್ ಯುನಿಟಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿ ಕನ್ನಡಪರ ಹೋರಾಟಗಾರರು, ಯುವ ಉದ್ಯಮಿ ಹಾಗೂ ಗುರುಕುಲ ಮೆಂಟರ್ಸ್ ಫೌಂಡೇಷನ್ ಸಂಸ್ಥಾಪಕರು ಆಗಿರುವ ಸೈಯದ್ ನದೀಮ್ ಎಸ್ (ಕನ್ನಡ ನದೀಮ್) ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಯುವ ಮುಖಂಡರೂ ಆಗಿರುವ ಯುವ ಉದ್ಯಮಿ ಚಿಂತಾಮಣಿ ಸಾದಿಕ್ ರವರನ್ನು ಆಯ್ಕೆಮಾಡಲಾಗಿದೆ.

Related Posts