ಭಾರತದ ಆರ್ಥಿಕತೆ ಕುಸಿತ: ರಘುರಾಮ್ ರಾಜನ್ ಎಚ್ಚರಿಕೆ! » Dynamic Leader
October 12, 2024
ದೇಶ

ಭಾರತದ ಆರ್ಥಿಕತೆ ಕುಸಿತ: ರಘುರಾಮ್ ರಾಜನ್ ಎಚ್ಚರಿಕೆ!

ಡಿ.ಸಿ.ಪ್ರಕಾಶ್, ಸಂಪಾದಕರು

ಭಾರತದ ಆರ್ಥಿಕ ಬೆಳವಣಿಗೆ ಕುಸಿತದ ಹಾದಿಯಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ. ಅವರು ಪಿಟಿಐಗೆ ನೀಡಿರುವ ಇಮೇಲ್ ಸಂದರ್ಶನದಲ್ಲಿ, ‘ದೇಶದಲ್ಲಿ ಖಾಸಗಿ ಹೂಡಿಕೆಯ ಕೊರತೆ; ಹೆಚ್ಚುತ್ತಿರುವ ಬಡ್ಡಿದರಗಳು; ಅಂತಾರಾಷ್ಟ್ರೀಯ ಆರ್ಥಿಕ ಹಿಂಜರಿತದಿಂದಾಗಿ, ಭಾರತವು 1950 ರಿಂದ 1980ರ ಅವಧಿಯಲ್ಲಿದ್ದ ಅತ್ಯಂತ ಕಡಿಮೆ (ಶೇ.4 ಕ್ಕಿಂತ ಕಡಿಮೆ) ಆರ್ಥಿಕ ಬೆಳವಣಿಗೆ ದರಕ್ಕೆ ತಳ್ಳಲ್ಪಡುವ ಅಪಾಯದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.4.4ಕ್ಕೆ ಇಳಿಕೆಯಾಗಿದೆ. ಕಳೆದ ಕೆಲವು ತ್ರೈಮಾಸಿಕಗಳಲ್ಲಿ, ಆರ್ಥಿಕ ಅಂಕಿಅಂಶಗಳು ಕೇವಲ ಕುಸಿತವನ್ನೇ ತೋರಿಸುತ್ತಿದೆ. ಖಾಸಗಿ ವಲಯವು ಹೊಸ ಹೂಡಿಕೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ.

ಇದರ ಮಧ್ಯೆ ಆರ್‌ಬಿಐ ಕೂಡ ನಿರಂತರವಾಗಿ ಬಡ್ಡಿ ದರವನ್ನು ಏರಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಜಾಗತಿಕ ಆರ್ಥಿಕತೆಯು ಆರ್ಥಿಕ ಹಿಂಜರಿತವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಇದರ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಚೇತರಿಕೆ ಕಾಣುವುದು ಅಸಾಧ್ಯವೆಂಬುದು ನನ್ನ ಅಭಿಪ್ರಾಯವಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಎಷ್ಟಿರುತ್ತದೆ ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸಲು ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮದಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿಸಲು ಎಷ್ಟು ಹಣಕಾಸಿನ ಹೂಡಿಕೆ ಬೇಕು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹೂಡಿಕೆಗೆ ಸೂಕ್ತವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯಲ್ಲಿ ಕಡಿಮೆಯಿದೆ. ಆದ್ದರಿಂದ, ಇದು ನಿರೀಕ್ಷಿತ ಫಲಿತಾಂಶವನ್ನು ನೀಡುವುದಿಲ್ಲ.

ಸರ್ಕಾರದ ವಕ್ತಾರರು ಭಾರತದಿಂದ ಮೊಬೈಲ್ ಫೋನ್ ರಫ್ತು ಹೆಚ್ಚಳವನ್ನು ಯೋಜನೆಯ ಯಶಸ್ಸಿನ ಉದಾಹರಣೆಯಾಗಿ ಉಲ್ಲೇಖಿಸಬಹುದು. ಆದರೆ ಪ್ರತಿ ಹ್ಯಾಂಡ್‌ಸೆಟ್‌ಗೂ ಭಾರತವು ತಯಾರಕರಿಗೆ ವಿಭಿನ್ನ ರೀತಿಯಲ್ಲಿ ಸಬ್ಸಿಡಿ ನೀಡುತ್ತಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಪ್ರಪಂಚದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳೆಲ್ಲ ಈಗ ಸೇವಾ ವಲಯವನ್ನು ಅವಲಂಬಿಸಿವೆ. ಇದರಲ್ಲಿ ಸಾರಿಗೆ, ಪ್ರವಾಸೋದ್ಯಮ, ಚಿಲ್ಲರೆ ವ್ಯಾಪಾರ, ವಸತಿ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಮಧ್ಯಂತರ ಕೌಶಲ್ಯ ಹೊಂದಿರುವವರಿಗೆ ಹೆಚ್ಚಿನ ಉದ್ಯೋಗಗಳು ಲಭ್ಯವಿರುತ್ತವೆ. ಅದಾನಿ-ಹಿಂಡೆನ್‌ಬರ್ಗ್ ನಂತಹ ಪ್ರಕರಣಗಳು ಸರ್ಕಾರ ಮತ್ತು ಉದ್ಯಮದ ನಡುವಿನ ಪರೋಕ್ಷ ಸಂಬಂಧವನ್ನು ಕೊನೆಗೊಳಿಸಲು ಸಹಾಯ ಮಾಡಬಹುದು. ಆದರೆ ಈ ವಿಚಾರದಲ್ಲಿ ವಿದೇಶದಿಂದ ನಕಲಿ ಕಂಪನಿಗಳ ಮೂಲಕ ಹೂಡಿಕೆ ಮಾಡಿರುವ ಆರೋಪದ ಬಗ್ಗೆ ಸೆಬಿ ತನಿಖೆ ನಡೆಸದಿರುವುದು ಅಚ್ಚರಿಯನ್ನು ಮೂಡಿಸಿದೆ’. ಎಂದು ಹೇಳಿದ್ದಾರೆ.

Amid the Adani row, former Reserve Bank of India (RBI) Governor Raghuram Rajan asked why markets regulator SEBI did not get to the bottom of the issues that were raised by US-based short-seller Hindenburg research. He also questioned why SEBI didn’t get in touch with the agency if it needed help from probing agencies.

“Why has SEBI not yet got to the bottom of the ownership of those Mauritius funds which have been holding and trading Adani stock? Does it need help from the investigative agencies?” news agency PTI quoted Rajan as asking.

Related Posts