ಹೊಂಬೇಗೌಡ ನಗರ ವಾರ್ಡ್ ಎಇಇ ಪ್ರದೀಪ್ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲು ದಸಂಸ ನಿರ್ಧಾರ! » Dynamic Leader
October 12, 2024
ಬೆಂಗಳೂರು

ಹೊಂಬೇಗೌಡ ನಗರ ವಾರ್ಡ್ ಎಇಇ ಪ್ರದೀಪ್ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲು ದಸಂಸ ನಿರ್ಧಾರ!

ಕಸದ ರಾಶಿಯನ್ನು ವಿಲೇವಾರಿ ಮಾಡದ ಹೊಂಬೇಗೌಡ ನಗರ ವಾರ್ಡ್ ಎಇಇ ಪ್ರದೀಪ್ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲು ದಸಂಸ ನಿರ್ಧಾರ!

ಬೆಂಗಳೂರು: ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಹೊಂಬೇಗೌಡ ನಗರ, (ವಾರ್ಡ್ 145) ಸಿದ್ದಯ್ಯ ರಸ್ತೆ, ಫ್ಯಾಮಿಲಿ ಕೋರ್ಟ್ ಸಮೀಪದಲ್ಲಿರುವ ರಸ್ತೆಯ ಎರಡೂ ಕಡೆ, ಬಿದ್ದಿರುವ ಕಸದ ರಾಶಿಯಿಂದ ಸಾರ್ವಜನಿಕರು ಮುಕ್ತವಾಗಿ ಓಡಾಡಲು ಬಹಳ ತೊಂದರೆ ಪಡುತ್ತಿದ್ದಾರೆ.

ಸುಮಾರು 5 ಅಡಿ ಎತ್ತರಕ್ಕೆ ಬಿದ್ದಿರುವ ಈ ಕಸದ ರಾಶಿಯನ್ನು ಕೂಡಲೇ ವಿಲೇವಾರಿ ಮಾಡಿ, ಸಾರ್ವಜನಿಕರು ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಂ.ಸುಬ್ರಮಣಿ, ಸಹಾಯಕ ಕಾರ್ಯಪಾಲಕ ಅಭಿಯಂತಕರಾದ ಪ್ರದೀಪ್ ಅವರಿಗೆ ಹಲವು ಬಾರಿ ದೂರು ನೀಡಿದ್ದಾರೆ. ‘ಬಂದು ನೋಡುವುದಾಗಿ, ಮಾಡಿಕೊಡುವುದಾಗಿ ಹೇಳುತ್ತಾರೆ ಹೊರೆತು, ಇಲ್ಲಿಯವರೆಗೆ ಒಮ್ಮೆಯಾದರೂ ಸ್ಥಳಕೆ ಬಂದು ನೋಡಿಯೇ ಇಲ್ಲ. ಇದರ ಬಗ್ಗೆ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಅವರ ಗಮನಕ್ಕೆ ತಂದರೂ ಯಾವ ಪ್ರಯೋಜನವು ಆಗುತ್ತಿಲ್ಲ’. ಎಂದು ಎಂ.ಸುಬ್ರಮಣಿ ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಸುದಾಮನಗರ ವಾರ್ಡ್ (118) ಸಿಕೆಸಿ ಗಾರ್ಡನ್, ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿಯೂ ಇದೇ ರೀತಿ ಕಸ-ಕಡ್ಡಿಗಳು ವಿಲೇವಾರಿ ಆಗದೆ ಗುಡ್ಡೆಕಟ್ಟಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನಾನುಕೂಲ ಆಗುತ್ತಿದೆ. ಎಇಇ ಪ್ರದೀಪ್ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಂದಾಗಿದೆ.

ಸಾರ್ವಜನಿಕ ಉದ್ದೇಶದಿಂದ ಕೇಳುತ್ತಿರುವ ಈ ಸ್ವಚ್ಚತಾ ಕಾರ್ಯವನ್ನು ಮಾಡಿಕೊಡಲು ಬಿಬಿಎಂಪಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ನಾಚಿಕೆಗೇಡು.

Related Posts