ಕಣ್ವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ ವಂಚನೆ! ಸಿಬಿಐಗೆ ವಹಿಸಲು ಶಾಸಕಿ ಸೌಮ್ಯ ರೆಡ್ಡಿ ಒತ್ತಾಯ!! » Dynamic Leader
September 18, 2024
ರಾಜಕೀಯ

ಕಣ್ವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ ವಂಚನೆ! ಸಿಬಿಐಗೆ ವಹಿಸಲು ಶಾಸಕಿ ಸೌಮ್ಯ ರೆಡ್ಡಿ ಒತ್ತಾಯ!!

ಬೆಂಗಳೂರು: ಬೆಂಗಳೂರಿನ ಕಣ್ವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಂಚನೆಯಿಂದ 23,000ಕ್ಕೂ ಹೆಚ್ಚು ಜನರು 50೦ ಕೋಟಿಗೂ ಅಧಿಕ ಹಣವನ್ನು ಕಳೆದುಕೊಂಡು ಕಳೆದ 3 ವರ್ಷಗಳಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆರಡು ಬ್ಯಾಂಕ್’ಗಳಾದ ಗುರು ರಾಘವೇಂದ್ರ ಹಾಗೂ ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯದ್ದು ಸಹ ಇದೇ ರೀತಿಯ ವಂಚನೆಯಾಗಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅಪಾದನೆ ಮಾಡಿದ್ದಾರೆ.

‘ವಂಚನೆಗೊಳಗಾದವರಲ್ಲಿ ಸುಮಾರು 10೦ ನಾಗರಿಕರು ನನ್ನನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು. ನಾನು ಈಗಾಗಲೇ ಸಹಕಾರ ಸಚಿವ ಎಸ್.ಟಿ.ಸೋಮಶೇಕರ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಕಣ್ವ ಸೇರಿ ಈ ವಂಚನೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದೇನೆ. ಬಹುತೇಕ ಜನ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರು ತಮ್ಮ ಜೀವಮಾನ ಪರ್ಯಂತ ದುಡಿದು ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಷ್ಟದಲ್ಲಿದ್ದು, ಹಣ ವಾಪಸಾಗಿ ನ್ಯಾಯ ಸಿಗುವವರೆಗೂ ಅವರ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ’ ಎಂದು ಶಾಸಕಿ ಸೌಮ್ಯ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಕಣ್ವ, ರಾಘವೇಂದ್ರ ಹಾಗೂ ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯಂತಹ ಜನವಿರೋಧಿ, ವಂಚಿತ ಸೊಸೈಟಿಗಳನ್ನು ಈ ಹಿಂದೆ ವಿನಿವಿಂಕ್ ಸೊಸೈಟಿಯನ್ನು ತಡೆಮಾಡಿದ ರೀತಿಯಲ್ಲಿ ತಡೆಮಾಡಿ, ಸೊಸೈಟಿಯ ಮುಖ್ಯಸ್ಥರನ್ನು ಜೈಲಿಗೆ ತಳ್ಳಿ ಅವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಮತ್ತು ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸಿ ಕೊಡುವಂತಹ ವ್ಯವಸ್ಥೆಯನ್ನೂ ಮಾಡಬೇಕು. ಶಾಸಕಿ ಸೌಮ್ಯ ರೆಡ್ಡಿಯ ನ್ಯಾಯ ಸಮ್ಮತವಾದ ಈ ಬೇಡಿಕೆಯನ್ನು ಪರಿಗಣಿಸಿ, ಸರ್ಕಾರ ಈ ಪ್ರಕರಣಗಳನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಿಕೊಡಬೇಕು.

Related Posts