10 ದಿನದೊಳಗೆ 164 ಕೋಟಿ ಪಾವತಿಸದಿದ್ದರೆ ಪಕ್ಷದ ಆಸ್ತಿ ಮುಟ್ಟುಗೋಲು! ಆಪ್ ಗೆ ನೋಟಿಸ್, ಕೇಜ್ರಿವಾಲ್ ಶಾಕ್..!! » Dynamic Leader
October 12, 2024
ದೇಶ

10 ದಿನದೊಳಗೆ 164 ಕೋಟಿ ಪಾವತಿಸದಿದ್ದರೆ ಪಕ್ಷದ ಆಸ್ತಿ ಮುಟ್ಟುಗೋಲು! ಆಪ್ ಗೆ ನೋಟಿಸ್, ಕೇಜ್ರಿವಾಲ್ ಶಾಕ್..!!

ದೆಹಲಿ: 10 ದಿನಗಳೊಳಗೆ 164 ಕೋಟಿ ರೂಪಾಯಿ ಪಾವತಿಸದಿದ್ದರೆ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಆಮ್ ಆದ್ಮಿ ಪಕ್ಷಕ್ಕೆ ನೋಟಿಸ್ ಜಾರಿಮಾಡಲಾಗಿದೆ. ಇದರಿಂದ ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

‘ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ಆಮ್ ಆದ್ಮಿ ಪಕ್ಷ ರಾಜಕೀಯ ಜಾಹೀರಾತುಗಳಿಗೆ ಹಣ ಸುರಿದಿದೆ’ ಎಂದು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಆರೋಪಿಸಿದ್ದಾರೆ. ಸಕ್ಸೇನಾ ಅವರು ಡಿಸಂಬರ್ 20ರಂದು ಪತ್ರವೊಂದನ್ನು ಬರೆದು ಕೂಡಲೇ 97 ಕೋಟಿ ಪಾವತಿಸುವಂತೆ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್, ‘ರಾಜ್ಯಪಾಲರಿಗೆ ಇಂತಹ ಪತ್ರ ಕಳುಹಿಸುವ ಅಧಿಕಾರವಿಲ್ಲ’ ಎಂದು ಉತ್ತರಿಸಿದ್ದರು.

ಈ ಹಿನ್ನಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಸಚಿವಾಲಯ 10 ದಿನದೊಳಗೆ 164 ಕೋಟಿ ರೂಪಾಯಿ ಪಾವತಿಸದಿದ್ದರೆ ಪಕ್ಷದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ಜಾರಿಮಾಡಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಆಯ್ಕೆಯಾದ ಸಚಿವರು ಮತ್ತು ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ಮದ್ಯ ನೀತಿ ಹಾಗೂ ಭ್ರಷ್ಟಾಚಾರದ ದೂರುಗಳ ಬೆನ್ನಲ್ಲೇ ಮತ್ತೆ 164 ಕೋಟಿ ರೂಪಾಯಿ ಸಮಸ್ಯೆ ಭುಗಿಲೆದ್ದು ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

Related Posts